ಶೋಯಬ್ ಅಖ್ತರ್ ದಾಖಲೆ ಮುರಿದ ಬೂಮ್ರಾ

ಟೆಸ್ಟ್ ಕ್ರಿಕೆಟಿನಲ್ಲಿ 12 ಬಾರಿ ಐದು ವಿಕೆಟ್ ಗೊಂಚಲು ಪಡೆದ ಜಸ್ಪ್ರೀತ್ ಬೂಮ್ರಾ.
ಈ ಮೂಲಕ ಅವರು ಪಾಕಿಸ್ತಾನದ ಶೋಯಬ್ ಅಖ್ತರ್ ಅವರ ದಾಖಲೆ ಮುರಿದರು.
ಬೂಮ್ರಾ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ 13ನೇ ಬಾರಿ ಐದು ವಿಕೆಟ್ ಪಡೆದರು
ಬೂಮ್ರಾ ಟೆಸ್ಟ್ ಕ್ರಿಕೆಟಿನಲ್ಲಿ 44 ಪಂದ್ಯಗಳಲ್ಲಿ 203 ವಿಕೆಟ್ ಗಳಿಸಿದ ಹೆಗ್ಗಳಿಕೆಗೂ ಪಾತ್ರರಾದರು.
ಈ ವಿಶಿಷ್ಟ ಮೈಲುಗಲ್ಲಿನಿಂದಾಗಿ ಬೂಮ್ರಾ ವಿಶ್ವದ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾಗಿ ಕ್ರಿಕೆಟ್ ಇತಿಹಾಸದಲ್ಲಿ ಸ್ಥಾನ ಪಡೆದರು.
ಕ್ರಿಕೆಟ್ ದಂತಕಥೆಗಳೆನಿಸಿದ ಶ್ರೀಲಂಕಾದ ಚಾಮಿಂಡಾ ವಾಸ್, ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ ಅವರನ್ನೂ ಬೂಮ್ರಾ ಹಿಂದಿಕ್ಕಿದರು.
ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ 12 ಬಾರಿ ಐದು ವಿಕೆಟ್ ಪಡೆದಿದ್ದರು.