ದಿಲ್ಲಿ ವ್ಯಕ್ತಿಗೆ ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು ದೃಢ

ಜಪಾನೀಸ್ ಎನ್ಸೆಫಾಲಿಟಿಸ್ ಒಂದು ರೀತಿಯ ಮಿದುಳು ಜ್ವರ
ಪಶ್ಚಿಮ ದಿಲ್ಲಿಯ 72 ವರ್ಷದ ವೃದ್ಧನಿಗೆ ಸೋಂಕು ದೃಢ
ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು ಅಪರೂಪದಲ್ಲೇ ಅಪರೂಪ
ಪಕ್ಷಿಗಳು, ಹಂದಿ, ದನಗಳಲ್ಲಿ ಚಲನವಾಗುವ ಸೋಂಕು
ಆದರೆ ಅವುಗಳಿಗೆ ರೋಗ ತಗುಲುವುದಿಲ್ಲ
ಸೋಂಕು ಇರುವ ಪಕ್ಷಿ, ಹಂದಿ ಅಥವಾ ದನಗಳಿಗೆ ಕಚ್ಚಿದ ಸೊಳ್ಳೆ ಮನುಷ್ಯರಿಗೆ ಕಚ್ಚಿದರೆ ಈ ಜ್ವರ ಹರಡುತ್ತದೆ
ಸೊಳ್ಳೆ ಕಚ್ಚಿದ ಸಾವಿರ ಜನರಲ್ಲಿ ಒಬ್ಬರಿಗೆ ಮಾತ್ರ ಈ ಮಿದುಳು ಜ್ವರ ಕಂಡುಬರುತ್ತದೆ