ಆನ್ ಲೈನ್ ಆ್ಯಪ್ ಗಳು ನಿಮ್ಮ ಫೋನ್ ಯಾವುದೆಂದು ನೋಡಿ ಸೇವೆಯ ದರ ನಿರ್ಧರಿಸುತ್ತದೆಯೇ?

ಆನ್ ಲೈನ್ ಆ್ಯಪ್ ಗಳು ನಿಮ್ಮ ಅಂತಸ್ತು ನೋಡಿ ಸೇವೆಯ ಬೆಲೆ ನಿರ್ಧರಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ
ಒಂದು ವಸ್ತುವನ್ನು ಒಂದೇ ಸ್ಥಳದಲ್ಲಿ ನಿಂತು ಎರಡು ಮೊಬೈಲ್ ಗಳಲ್ಲಿ ಆರ್ಡರ್ ಮಾಡಿದಾಗ ಬೇರೆ ಬೇರೆ ದರ ತೋರಿಸುತ್ತದೆ ಎಂದ ವರದಿ
ಈ ಕುರಿತು 𝚃𝚑𝚎 𝚁𝚎𝚍 𝙼𝚒𝚔𝚎 ಚಾನೆಲ್ ನ ಸಂಕೇತ್ ಉಪಾಧ್ಯಯ್ ಸಾಕ್ಷಿ ಸಮೇತ ಪ್ರಸ್ತುತಪಡಿಸಿದ್ದಾರೆ.
ಕಡಿಮೆ ದರದಲ್ಲಿ ಟ್ಯಾಕ್ಸಿ ಸೇವೆ ಸಲ್ಲಿಸಿ ಉಬರ್ ಜನಮನ್ನಣೆ ಪಡೆದಿತ್ತು. ಆದರೆ ಈಗ ಉಬರ್ ನಮ್ಮ ಖಾಸಗಿ ಮಾಹಿತಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ
ಆಂಡ್ರಾಯ್ಡ್ ಮತ್ತು ಐ-ಫೋನ್ ಬಳಸಿ ಟ್ಯಾಕ್ಸಿ ಬುಕ್ ಮಾಡಿದರೆ ಬೇರೆ ಬೇರೆ ದರ ತೋರಿಸುತ್ತದೆ.
ಝೆಪ್ಟೋ ನಂತಹ ಡೆಲಿವರಿ ಆ್ಯಪ್ ಸಹ ಇದೇ ರೀತಿಯ ಬೆಲೆ ವ್ಯತ್ಯಾಸ ತೋರಿಸುತ್ತಿದೆ.
ಈ ರೀತಿ ದರದಲ್ಲಿನ ವ್ಯತ್ಯಾಸ ಕೇವಲ ಉಬರಿಗೆ ಸೀಮಿತವಾಗಿಲ್ಲ ಎಂದ ವರದಿ