2024ರ ಭಾರತದ ಗೂಗಲ್ ಟಾಪ್ ಸರ್ಚ್ ಯಾವುದು ಗೊತ್ತೇ?

ಭಾರತೀಯರು ಕ್ರಿಕೆಟ್, ರಾಜಕೀಯದಲ್ಲಿ ಅತೀವ ಆಸಕ್ತಿ ಹೊಂದಿರುವ ಸಂಗತಿ 2024ರ ಗೂಗಲ್ ಸರ್ಚ್ ದತ್ತಾಂಶದಲ್ಲಿ ಬಯಲಾಗಿದೆ
IPL, T-20 ವಿಶ್ವಕಪ್ ಹಾಗೂ ಬಿಜೆಪಿ ಕುರಿತ ಕೀವರ್ಡ್ ಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ
ಐಪಿಎಲ್ ಕುರಿತ ಹುಡುಕಾಟವು ಮೇ 12 ಹಾಗೂ ಮೇ 18ರಂದು ಏರಿಕೆಯಾಗಿತ್ತು
2024ರಲ್ಲಿ ಟಿ-20 ವಿಶ್ವಕಪ್ ಕುರಿತ ಕೀ ವರ್ಡ್ ಗಳೂ ಅಗ್ರ 10ರ ಪಟ್ಟಿಯಲ್ಲಿದೆ
ಖ್ಯಾತ ವ್ಯಕ್ತಿಗಳ ಪೈಕಿ ರತನ್ ಟಾಟಾ ಹೆಸರು ಅಗ್ರ ಸ್ಥಾನದಲ್ಲಿದೆ
ರಾಜಕೀಯ ವಿಭಾಗದಲ್ಲಿ ಬಿಜೆಪಿ 2024ರಲ್ಲಿ ಗೂಗಲ್‌ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟಿದೆ. ಜೂನ್ 2 ಹಾಗೂ ಜೂನ್ 8ರ ನಡುವೆ ಏರುಗತಿ ಕಂಡಿದೆ
ಈ ವರ್ಷದಲ್ಲಿ ಚುನಾವಣಾ ಫಲಿತಾಂಶಗಳ ಕೀವರ್ಡ್ ಹೆಚ್ಚು ಹುಡುಕಲ್ಪಟ್ಟ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024, ಪ್ರೊ ಕಬಡ್ಡಿ ಲೀಗ್, ಇಂಡಿಯನ್ ಸೂಪರ್ ಲೀಗ್ ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ