ಫೆವಿಕಾಲ್ ಟ್ರೇಡ್‍ಮಾರ್ಕ್ ಉಲ್ಲಂಘನೆ ಆರೋಪ: ಸ್ಟೇಷನರಿ ಕಂಪನಿಗೆ 50 ರೂ. ಲಕ್ಷ ದಂಡ

ಫೆವಿಕಾಲ್ ಕಂಪನಿಯ ಬ್ರಾಂಡನ್ನೇ ಹೋಲುವ ಅಂಟಿನ ಬಾಟಲಿಯನ್ನು ಮಾರುಕಟ್ಟೆಗೆ ತಂದಿದ್ದ ಪ್ರಿಮಿಯರ್ ಸ್ಟೇಷನರಿ ಇಂಡಸ್ಟ್ರೀಸ್
ಪ್ರಿಮಿಯರ್ ಸ್ಟೇಷನರಿ ಇಂಡಸ್ಟ್ರೀಸ್ ವಿರುದ್ಧ ದಾವೆ ಹೂಡಿದ್ದ ಪಿಡಿಲೈಟ್ ಇಂಡಸ್ಟ್ರಿಸ್
ಸ್ಟೇಷನರಿ ಕಂಪನಿಗೆ 50 ರೂ. ಲಕ್ಷ ದಂಡ ವಿಧಿಸಿದ ಬಾಂಬೆ ಹೈಕೋರ್ಟ್
2017ರ ಆದೇಶವನ್ನು ಸ್ಟೇಷನರಿ ಕಂಪನಿ ಉಲ್ಲಂಘಿಸಿದೆ ಎಂದ ನ್ಯಾಯಮೂರ್ತಿ ರಿಯಾಝ್ ಚಾಗ್ಲಾ
ಫೆವಿಕಾಲ್‍ನಂಥೆ ಕಾಣುವ ಅಂಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ಈ ಹಿಂದೆಯೇ ಆದೇಶ ನೀಡಿದ್ದ ನ್ಯಾಯಾಲಯ
ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದ ಸ್ಟೇಷನರಿ ಇಂಡಸ್ಟ್ರೀಸ್
2017ರ ನ್ಯಾಯಾಲಯದ ಆದೇಶದ ಬಳಿಕ ನಾವು ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದ್ದವು ಎಂದ ಸ್ಟೇಷನರಿ ಕಂಪೆನಿ
ನಮಗೆ ನ್ಯಾಯಾಲಯದ ಆದೇಶದ ಅರಿವಿರಲಿಲ್ಲ ಎಂದ ಸ್ಟೇಷನರಿ ಇಂಡಸ್ಟ್ರೀಸ್