ಲಘು ಮೋಟಾರು ವಾಹನ (LMV) ಲೈಸೆನ್ಸ್‌ ಇದ್ದವರಿಗೆ ಸಿಹಿ ಸುದ್ದಿ

LMV ಪರವಾನಗಿ ಇದ್ದರೆ ಇನ್ನು 7,500 ಕೆಜಿ ತೂಕದವರೆಗಿನ ವಾಹನ ಚಲಾಯಿಸಬಹುದು
ಕಾನೂನುಬದ್ಧವಾಗಿ ಅರ್ಹರಾಗಿರುತ್ತಾರೆ ಎಂದ ಸುಪ್ರೀಂ ಕೋರ್ಟ್
ಸಾರಿಗೆ ವಾಹನದ ತೂಕವು 7500 ಕೆಜಿಯೊಳಗೆ ಇದ್ದರೆ, LMV ಪರವಾನಗಿ ಹೊಂದಿರುವ ವ್ಯಕ್ತಿ ಆ ವಾಹನವನ್ನು ಚಲಾಯಿಸಬಹುದು
LMV ಹೊಂದಿರುವ ವ್ಯಕ್ತಿಯು ನಿರ್ದಿಷ್ಟ ತೂಕದ ಸಾರಿಗೆ ವಾಹನ ಚಲಾಯಿಸುವುದಕ್ಕೆ ಕಾನೂನಿನಲ್ಲಿ ಬದಲಾವಣೆ ತರುವ ಅಗತ್ಯವಿದೆಯೇ ಎಂದು ಕೇಂದ್ರ ಸರ್ಕಾರವನ್ನು ಕೇಳಿದ್ದ ನ್ಯಾಯಾಲಯ
ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ LMV ಚಾಲನಾ ಪರವಾನಗಿ ಹೊಂದಿರುವವರು ಜವಾಬ್ದಾರರು ಎಂಬುದಕ್ಕೆ ಪ್ರಾಯೋಗಿಕ ಸಾಕ್ಷಿಯಿಲ್ಲ ಎಂದ ನ್ಯಾಯಾಲಯ
ರಸ್ತೆ ಸುರಕ್ಷತೆಯು ಜಾಗತಿಕವಾಗಿ ಗಂಭೀರವಾದ ಸಾರ್ವಜನಿಕ ಸಮಸ್ಯೆಯಾಗಿದೆ ಎಂದ ನ್ಯಾಯಮೂರ್ತಿ ಹೃಷಿಕೇಶ್ ರಾಯ್