2024 ರ ನೊಬೆಲ್‌ ಪುರಸ್ಕೃತರ ಪಟ್ಟಿ ಇಲ್ಲಿದೆ...

ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿದೆ
ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುನ್ನತ ಸಂಶೋಧನೆ, ಆವಿಷ್ಕಾರ ಮತ್ತು ಸೇವೆಗಳಿಗೆ ನೊಬೆಲ್‌ ಪ್ರಶಸ್ತಿ ನೀಡಲಾಗುತ್ತದೆ
ಸ್ವೀಡನ್ ಸರಕಾರ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತದೆ
ಮೈಕ್ರೋ-RNA ಕಂಡು ಹಿಡಿದ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವಕುಂ ಅವರನ್ನು ಈ ವರ್ಷದ ನೊಬೆಲ್‌ ಗೆ ಆಯ್ಕೆ ಮಾಡಲಾಗಿದೆ.
ಅಮೆರಿಕದ ಡ್ಯಾರನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಹಾಗೂ ಜೇಮ್ಸ್ ಎ ರಾಬಿನ್ಸನ್ ಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ
ಮಷೀನ್ ಲರ್ನಿಂಗ್ ಕುರಿತ ಅಧ್ಯಯನಕ್ಕೆ ಜಾನ್ ಹೋಪಫೀಲ್ಡ್ ಮತ್ತು 'ಜೋಫರಿ ಹಿಂಟನ್' ಅವರಿಗೆ ಭೌತಶಾಸ್ತ್ರದ ನೊಬೆಲ್ ದೊರೆತಿದೆ.
ಪ್ರೊಟೀನ್ ಕುರಿತು ಗಾಢ ಅಧ್ಯಯನ ಮಾಡಿದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್, ಮತ್ತು ಜಾನ್ ಜಂಪರ್ ಅವರಿಗೆ ರಸಾಯನಶಾಸ್ತ್ರದ ನೊಬೆಲ್ ಲಭಿಸಿತು.
ದಕ್ಷಿಣ ಕೊರಿಯಾ ಲೇಖಕಿ ಹಾನ್‌ ಕಂಗ್‌ಗೆ 2024ರ ಸಾಹಿತ್ಯ ನೊಬೆಲ್ ಪ್ರಶಸ್ತಿ
ಜಪಾನ್ ನ ʼನಿಹಾನ್ ಹಿಡಾಂಕ್ಯೊʼ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ