ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಚೀನಾವನ್ನು ಸೋಲಿಸಿದ ಭಾರತ!

ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ!
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ದ್ವಿಚಕ್ರ ವಾಹನ ತಯಾರಕರಿಗೆ ಭರ್ಜರಿ ಲಾಭ.
ಭಾರತವು 2023ರಲ್ಲಿ ಚೀನಾಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.
SIAM ಅಂಕಿ-ಅಂಶಗಳ ಪ್ರಕಾರ 2023ರಲ್ಲಿ ಚೀನಾದಲ್ಲಿ 1.66 ಕೋಟಿ, ಭಾರತದಲ್ಲಿ 1.71 ಕೋಟಿ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ.
ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು 15 ಸೆಪ್ಟೆಂಬರ್ 2021ರಂದು ಪ್ರಾರಂಭಿಸಲಾಗಿತ್ತು.
ಈ ಯೋಜನೆಯಡಿಯಲ್ಲಿ 25,938 ಕೋಟಿ ರೂಪಾಯಿಗಳ ಬಜೆಟ್ ವೆಚ್ಚವನ್ನು ಇರಿಸಲಾಗಿತ್ತು.
ಅಡ್ವಾನ್ಸ್ಡ್ ಆಟೋಮೋಟಿವ್ ಟೆಕ್ನಾಲಜಿ (AAT) ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿತ್ತು.
ಇದಲ್ಲದೆ, ಆಟೋಮೊಬೈಲ್ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿತ್ತು.