ಇಸ್ರೋದಿಂದ ಬಾಹ್ಯಾಕಾಶ ಡಾಕಿಂಗ್ ಉಪಗ್ರಹಗಳ ಉಡಾವಣೆ

ಸ್ಪೇಸ್ ಡಾಕಿಂಗ್ ತಂತ್ರಜ್ಞಾನವನ್ನು ಹೊಂದಿದ ವಿಶ್ವದ ಬೆರಳೆಣಿಕೆಯ ದೇಶಗಳ ಸಾಲಿಗೆ ಸೇರಲು ಭಾರತ ಮತ್ತಷ್ಟು ಸನಿಹ
ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳು ಸಂಧಿಸಲು ಅವಕಾಶ ಮಾಡಿಕೊಡುವ ಸ್ಪೇಸ್ ಡಾಕಿಂಗ್ ತಂತ್ರಜ್ಞಾನ
ಇಸ್ರೋ 220 ಕೆ.ಜಿ ತೂಕದ ಎರಡು ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುಸುವಲ್ಲಿ ಯಶಸ್ವಿಯಾಗಿದೆ.
ಸ್ಪೇಸ್ ಡಾಕಿಂಗ್ ಎಕ್ಸ್ಪೆರಿಮೆಂಟ್ ಮಿಷನ್ ಭಾಗವಾಗಿ ಪಿಎಸ್ಎಲ್ ವಿ-ಸಿ60 ಅನ್ನು ಉಡಾಯಿಸಲಾಯಿತು.
ಚೇಸರ್ ಮತ್ತು ಟಾರ್ಗೆಟ್ ಎಂಬ ಎರಡು ಉಪಗ್ರಹಗಳನ್ನು ಪ್ರತ್ಯೇಕವಾಗಿ ಉಡಾಯಿಸಲಾಗಿತ್ತು.
ಮುಂದಿನ ಕೆಲ ದಿನಗಳಲ್ಲಿ ಇವುಗಳನ್ನು ಜೋಡಿಸಲಾಗುವುದು.
ಇದು ಯಶಸ್ವಿಯಾದರೆ ಭಾರತವು ಅಮೆರಿಕ, ರಷ್ಯಾ, ಮತ್ತು ಚೀನಾದ ಸಾಲಿಗೆ ಸೇರಲಿದೆ.