ಮಾಲಿನ್ಯ ರಹಿತ ಭಾರತದ ನಗರಗಳು!

ನಮ್ಮ ದೇಶದ ಕೆಲವು ಪಟ್ಟಣಗಳು ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಅವುಗಳ ಪಟ್ಟಿ ಇಲ್ಲಿವೆ...
ಐಝಾವಲ್—ಮಿಜೋರಾಂ
ಪರ್ವತಗಳ ಶ್ರೇಣಿಯಲ್ಲಿರುವ ಈ ಪಟ್ಟಣ, ಪರ್ವತಗಳಿಂದ ಬರುವ ಸ್ವಚ್ಛ ಗಾಳಿ ಮತ್ತು ಸುತ್ತ ಹಸಿರು ವನದಿಂದ, ಐಝಾವಲ್ ಮಾಲಿನ್ಯ ರಹಿತವಾಗಿದೆ.
ಕೊಹಿಮಾ—ನಾಗಾಲ್ಯಾಂಡ್
ನೈಸರ್ಗಿಕ ಸೌಂದರ್ಯದೊಂದಿಗೆ ಕೊಹಿಮಾ ಮಾಲಿನ್ಯ ರಹಿತವಾಗಿದೆ.
ಶಿಲ್ಲಾಂಗ್—ಮೇಘಾಲಯ
ಸ್ವಚ್ಛ ಗಾಳಿ ಮತ್ತು ತೀವ್ರ ಮಳೆಗೆ ಹೆಸರುವಾಸಿಯಾಗಿರುವ 'ಶಿಲ್ಲಾಂಗ್' ಅನ್ನು 'ಪೂರ್ವದ ಸ್ಕಾಟ್ ಲ್ಯಾಂಡ್' ಎಂದೇ ಕರೆಯಲಾಗುತ್ತದೆ.
ಅಗರ್ತಲಾ — ತ್ರಿಪುರಾ
ಸುತ್ತ ಬೆಟ್ಟಗಳನ್ನು ಮತ್ತು ಕಣಿವೆಗಳನ್ನು ಹೊಂದಿರುವ ಈ ಪಟ್ಟಣ, ಸ್ವಚ್ಛತೆಗೂ ಹೆಸರು ಗಳಿಸಿದೆ.
ಗ್ಯಾಂಗಟಾಕ್—ಸಿಕ್ಕಿಂ
ಈ ಪರಿಸರ ಸ್ನೇಹಿ ಪಟ್ಟಣವು, ಸ್ವಚ್ಛ ಗಾಳಿ ಮತ್ತು ಹಿಮಾಲಯದ ಸುಂದರ ನೋಟ ಒದಗಿಸುತ್ತದೆ.
ಪಣಜಿ—ಗೋವಾ
'ಗೋವಾ'ದ ರಾಜಧಾನಿ ಪಣಜಿ, ಕಡಲತೀರಗಳಿಗೆ ಮತ್ತು ಸ್ವಚ್ಛತೆಗೆ ಪ್ರಸಿದ್ಧವಾಗಿದೆ.
ಅಮರಾವತಿ—ಆಂಧ್ರ ಪ್ರದೇಶ:
ಈ ನಗರದಲ್ಲಿ ಉಸಿರಾಡಲು ಸ್ವಚ್ಛ ಗಾಳಿ ಇದೆ.
ಪುದುಚೇರಿ
ಕಡಲತೀರಗಳಿಗೆ ಪ್ರಸಿದ್ಧವಾಗಿರುವ ಈ ನಗರವು ಮಾಲಿನ್ಯ-ರಹಿತವಾಗಿದೆ.
ಕೊಳ್ಳಂ—ಕೇರಳ
ತೆಂಗಿನ ತೋಟಗಳು ಮತ್ತು ಸಮುದ್ರ ಕಿನಾರೆಗಳಿಂದ ಈ ನಗರವು ಸ್ವಚ್ಛ ನಗರದ ಬಿರುದು ಪಡೆದಿದೆ.