ಬುಮ್ರಾರನ್ನು ʼಪ್ರೈಮೇಟ್ʼ​ಗೆ ಹೋಲಿಸಿದ ಮಾಜಿ ಇಂಗ್ಲೆಂಡ್ ಆಟಗಾರ್ತಿ

ವಿವಾದದ ಬಳಿಕ ಕ್ಷಮೆಯಾಚಿಸಿದ ಇಶಾ ಗುಹಾ
ಭಾರತ ಮತ್ತು ಆಸ್ಟ್ರೇಲಿಯ ತಂಡದ ನಡುವಿನ ಮೂರನೆಯ ಟೆಸ್ಟ್ ವೀಕ್ಷಕ ವಿವರಣೆಯ ಸಂದರ್ಭ ಬುಮ್ರಾರನ್ನು ʼಪ್ರೈಮೇಟ್ʼ ಪ್ರಭೇದಕ್ಕೆ ಹೋಲಿಸಿದ್ದ ಇಶಾ
ಅದ್ಭುತ ಪ್ರದರ್ಶನ ನೀಡುತ್ತಿರುವ ಬುಮ್ರಾ ಅವರನ್ನು ಶ್ಲಾಘಿಸಲು ತಪ್ಪು ಪದ ಆಯ್ದುಕೊಂಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದ ಮಾಜಿ ಇಂಗ್ಲೆಂಡ್ ಆಟಗಾರ್ತಿ
ಬುಮ್ರಾ ಎರಡು ವಿಕೆಟ್​ಗಳನ್ನು ಕಬಳಿಸಿದ ಬಳಿಕ ಅವರ ಬಗ್ಗೆ ಮೆಚ್ಚುಗೆ ಸೂಚಿಸುವ ಭರದಲ್ಲಿ ಇಶಾ ʼಪ್ರೈಮೇಟ್ʼ ಎಂದು ಕರೆದಿದ್ದಾರೆ
"ನಿನ್ನೆಯ ಕಾಮೆಂಟರಿಯಲ್ಲಿ ನಾನು ವಿಭಿನ್ನ ರೀತಿಯಲ್ಲಿ ಅರ್ಥೈಸಬಹುದಾದ ಪದವನ್ನು ಬಳಸಿದ್ದೇನೆ"
ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸಲು ಬಯಸುತ್ತೇನೆ ಎಂದ ಇಶಾ
ನಾನು ಇಷ್ಟಪಡುವ ಆಟಗಾರರಲ್ಲಿ ಬೂಮ್ರಾ ಕೂಡ ಒಬ್ಬರು. ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶವಿರಲಿಲ್ಲ ಎಂದು ಸ್ಪಷ್ಟನೆ