ಹಾಲಿವುಡ್‌ನಲ್ಲೂ ಮಿಂಚಿದ್ದ ಮಲಯಾಳಂ ಹಿರಿಯ ನಟ ಥಾಮಸ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ ಥಾಮಸ್ ಬರ್ಲೀ ಕುರಿಶಿಂಗಲ್ ಮಂಗಳವಾರ (ಡಿ.17 ರಂದು) ನಿಧನರಾದರು.
94ರ ಹರೆಯದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು
1953ರಲ್ಲಿ ʼತಿರಮಲʼ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಗೈದರು.
ಅವರು ಹಾಲಿವುಡ್‌ನಲ್ಲಿ ನೆವರ್ ಸೋ ಫ್ಯೂ (1959) ಸಹಿತ ಕೆಲವು ಟಿವಿ ಶೋಗಳಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು.
ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಟನೆಯ ಕೋರ್ಸ್‌ ಮಾಡಿದ್ದಾರೆ
ಮಕ್ಕಳಿಗಾಗಿ ʼಮಾಯಾʼ ಎಂಬ ಇಂಗ್ಲಿಷ್ ಚಲನಚಿತ್ರವನ್ನು ನಿರ್ಮಿಸಿ ಖ್ಯಾತಿಯಾಗಿದ್ದರು.