ವಿಮಾನಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಕರೆಗಳು ವಿಮಾನಯಾನ ಸಂಸ್ಥೆಗಳನ್ನು ತಲ್ಲಣಗೊಳಿಸಿದೆ.
PC: Meta AI
ವಾಯುಯಾನ ಸುರಕ್ಷತೆಯ ಬಗ್ಗೆ ದೇಶಾದ್ಯಂತ ತೀವ್ರ ಕಳವಳ
PC: Meta AI
ಬಾಂಬ್ ಬೆದರಿಕೆಗಳ ಸುರಿಮಳೆಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದ ವಿಮಾನಯಾನ ಸಂಸ್ಥೆಗಳು
PC: Meta AI
ಹಾರಾಟದ ನಡುವೆ ಬಾಂಬ್ ಬೆದರಿಕೆ ಬಂದರೆ ಎಚ್ಚರಿಕೆಯನ್ನು ಹೊರಡಿಸಲಾಗುತ್ತದೆ
PC: Meta AI
ವಿಮಾನ ನಿಲ್ದಾಣದಲ್ಲಿಯ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ(ಬಿಎಟಿಸಿ)ಯ ಸಭೆಯನ್ನು ತಕ್ಷಣವೇ ಕರೆಯಲಾಗುತ್ತದೆ
PC: Meta AI
ಬೆದರಿಕೆಯನ್ನು ತೂಗಿ ನೋಡಿದ ಬಳಿಕ ಬಿಎಟಿಸಿ ಮುಂದಿನ ಕ್ರಮದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳುತ್ತದೆ.
PC: Meta AI
ಬೆದರಿಕೆಯನ್ನು ‘ನಿರ್ದಿಷ್ಟ’ ಎಂದು ಪರಿಗಣಿಸಿದರೆ ಎಟಿಸಿ ಅನ್ನು ಸಂಪರ್ಕಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಪೈಲಟ್‌ಗಳಿಗೆ ಸೂಚಿಸಲಾಗುತ್ತದೆ
PC: Meta AI
ಹಾರಾಟದ ಸ್ಥಳವನ್ನು ಆಧರಿಸಿ ನಿರ್ಗಮನ ವಿಮಾನ ನಿಲ್ದಾಣಕ್ಕೆ ಮರಳುವಂತೆ, ನಿಗದಿತ ಗಮ್ಯಸ್ಥಾನಕ್ಕೆ ಹೋಗುವಂತೆ ಅಥವಾ ವಿಮಾನವನ್ನು ಸಮೀಪದ ವಿಮಾನ ನಿಲ್ದಾಣದಲ್ಲಿ ಇಳಿಸುವಂತೆ ಪೈಲಟ್‌ಗಳಿಗೆ ತಿಳಿಸಲಾಗುತ್ತದೆ
PC: Meta AI
ಇನ್ನೂ ಹಾರಾಟವನ್ನು ಆರಂಭಿಸಿರದ ವಿಮಾನಕ್ಕೆ ಬೆದರಿಕೆ ಬಂದರೆ ಬಿಟಿಎಸಿ ಜೊತೆ ಸಮಾಲೋಚನೆಯ ಬಳಿಕ ಸಮಗ್ರ ಭದ್ರತಾ ತಪಾಸಣೆಗಳಿಗಾಗಿ ವಿಮಾನವನ್ನು ನಿಲ್ದಾಣದಲ್ಲಿಯ ಪ್ರತ್ಯೇಕ ಸ್ಥಳಕ್ಕೆ ಸಾಗಿಸಲಾಗುತ್ತದೆ.
PC: Meta AI
"ಶೇ.99.99ರಷ್ಟು ಬೆದರಿಕೆಗಳು ನಕಲಿಯಾಗಿರುತ್ತವೆ ಎನ್ನುವುದು ನಮಗೆ ಗೊತ್ತು, ಆದರೆ ಉಳಿದ ಶೇ.0.01 ಪ್ರಕರಣಗಳಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳಲು ಯಾರೂ ಬಯಸುವುದಿಲ್ಲ" ಎಂದ ಅಧಿಕಾರಿ