ಏನಿದು ಲೆಬನಾನ್ ಮೇಲೆ ಇಸ್ರೇಲ್ ಬಳಸಿದ ʼಪೇಜರ್ʼ ಅಸ್ತ್ರ?

'ಪೇಜರ್' ಎಂದರೇನು ಮತ್ತು ಅದನ್ನು ಏಕೆ ಬಳಸಲಾಗುತ್ತದೆ?
ಪೇಜರ್ ಅಥವಾ ಬೀಪರ್ ಒಂದು ಸಣ್ಣ ವೈರ್ಲೆಸ್ ಸಂವಹನ ಸಾಧನ.
ಸೆಲ್ ಫೋನ್‌ಗಳು ಜನಪ್ರಿಯವಾಗುವ ಮೊದಲು ಪೇಜರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು.
ಇವುಗಳನ್ನು ಕಿರು ಸಂದೇಶಗಳು ಅಥವಾ ಎಚ್ಚರಿಕೆಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಉಪಯೋಗಿಸಲಾಗುತ್ತದೆ.
ಮೊಬೈಲ್ ಫೋನ್ ಗಳಿಗಿಂತ ಭಿನ್ನವಾಗಿ, ಇಂಟರ್ನೆಟ್ ಬದಲಿಗೆ ಪೇಜರ್ ಗಳು ರೇಡಿಯೊ ತರಂಗಗಳನ್ನು ಆಧರಿಸಿ ಕೆಲಸ ಮಾಡುತ್ತವೆ.
ರೇಡಿಯೊ ಫ್ರೀಕ್ವೆನ್ಸಿ ಮೂಲಕ ಸಾಮಾನ್ಯವಾಗಿ ಆಲ್ಫಾನ್ಯೂಮರಿಕ್ ಸಂದೇಶಗಳನ್ನು ಅದು ಸ್ವೀಕರಿಸುತ್ತದೆ.
ರೇಡಿಯೋ ತರಂಗಗಳ ಮೂಲಕ ಸಂದೇಶ ಕಳುಹಿಸಿದಾಗ ಪೇಜರ್ ವಿಶಿಷ್ಟ ರೀತಿಯಲ್ಲಿ ಬೀಪ್ ಮಾಡಿ ಬಳಕೆದಾರರನ್ನು ಎಚ್ಚರಿಸುತ್ತದೆ.
ಸಂದೇಶ ಪಡೆದವರು ಅದಕ್ಕೆ ಪ್ರತಿಕ್ರಿಯಿಸಲು ಫೋನ್ ಅನ್ನೇ ಅವಲಂಬಿಸಬೇಕಾಗುತ್ತದೆ.
11994ರಲ್ಲಿ ವಿಶ್ವದಾದ್ಯಂತ 6.1 ಕೋಟಿ ಪೇಜರ್‌ಗಳು ಚಲಾವಣೆಯಲ್ಲಿದ್ದವು
ಮೊಬೈಲ್ ಫೋನ್‌ಗಳು ಧ್ವನಿ ಕರೆಗಳು, ಪಠ್ಯ ಸಂದೇಶಗಳು ಮತ್ತು ಇಂಟರ್ನೆಟ್ ಪ್ರವೇಶವನ್ನು ಒಳಗೊಂಡಂತೆ ಹೆಚ್ಚು ಸುಧಾರಿತ ಸಂವಹನ ಆಯ್ಕೆಗಳನ್ನು ನೀಡುತ್ತವೆ.
ಹಾಗಾಗಿ, ಪೇಜರ್ ಗಳ ಬಳಕೆ ಕಡಿಮೆಯಾಯಿತು