ಯಾದಗಿರಿ: ಚಿತ್ರದುರ್ಗದ ಶ್ರೀ ಮಠದ ಬಸವಕುಮಾರ ಮಹಾಸ್ವಾಮಿಗಳಿಗೆ ಶಸಾಪ ವತಿಯಿಂದ ಸನ್ಮಾನ

ಯಾದಗಿರಿ: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಡಾ.ಸಿದ್ದರಾಮ ಬೆಲ್ದಾಳ ಶರಣರ ಸಮ್ಮೆಳನಾಧ್ಯಕ್ಷತೆಯಲ್ಲಿ ಜನವರಿ 18 & 19 ರ ಎರಡು ದಿನಗಳ ಕಾಲ ನಡೆದಿರುವ 13 ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ನೇತೃತ್ವ ವಹಿಸಿ ಅದ್ದೂರಿಯಾಗಿ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಿದ ಚಿತ್ರದುರ್ಗ ಶ್ರೀ ಮಠದ ಬಸವಕುಮಾರ ಮಹಾಸ್ವಾಮಿಗಳಿಗೆ ಯಾದಗಿರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವಕುಮಾರ ಮಹಾಸ್ವಾಮಿಗಳು ಯಾದಗಿರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಯಾಗಲು ತಾವು ಕೂಡ ಕಾರಣಿಬೂತರು ಎಂದು ಹೇಳಿದರು.
ನಿಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ವಚನ ಗೋಷ್ಠಿಗಳು. ದತ್ತಿ ಪ್ರಶಸ್ತಿಗಳು. ಯಾದಗಿರಿ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಹೆಚ್ಚು ಹೆಚ್ಚು ಸದಸ್ಯರನ್ನು ಮಾಡಿ ಶರಣ ಸಾಹಿತ್ಯ ಪರಿಷತ್ತು ಉದ್ದೇಶಗಳನ್ನು ಪ್ರಸಾರ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸಿದ್ದಪ್ಪ ಎಸ್ ಹೊಟ್ಟಿ ಮಾತನಾಡಿ ಎರಡು ದಿನಗಳ ಕಾಲ ಚಿತ್ರದುರ್ಗ ಶ್ರೀ ಮಠದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ೧೩ ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಚಿಂತನ ಗೋಷ್ಟಿ ಶರಣರ ನಡೆದು ಬಂದ ನಾಟಕಗಳು ಪ್ರದರ್ಶನ. ಬಸವಣ್ಣನವರ ನಾಟಕ ಪ್ರದರ್ಶನ. ಚಿತ್ರದುರ್ಗ ಶ್ರೀ ಮಠದ ಜಯದೇವ ಮಹಾಸ್ವಾಮಿಗಳ ಕುರಿತು ನಾಟಕ ಎರಡು ದಿನಗಳ ಕಾಲ ಅದ್ಭುತ ಪ್ರದರ್ಶನ ಮಾಡಿದ್ದರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಯಾದಗಿರಿ ಜಿಲ್ಲಾ ಗೌರವ ಅಧ್ಯಕ್ಷರಾದ ಗುರಮಿಠಕಲ್ ಖಾಸ ಮಠದ ಶಾಂತವೀರ ಮುರಘರಾಜೇಂದ್ರ ಸ್ವಾಮಿಗಳು. ಡಾ. ಭೀಮರಾಯ ಲಿಂಗೇರಿ. ಡಾ. ಎಸ್ ಎಸ್ ನಾಯಕ. ಬಸವರಾಜ ಅರಳಿ ಮೋಟ್ನಳ್ಳಿ. ಆರ್ ಮಾಹದೇವಪ್ಪ ಅಬ್ಬೆತುಮಕೂರ. ಸೋಮಶೇಖರ್ ಮಣ್ಣೂರ. ನಾಗೇಂದ್ರ ಜಾಜಿ. ನೂರಂದಪ್ಪ ಲೇವಡಿ. ವೀರಭದ್ರಯ್ಯ ಜಾಕಾಮಠ. ಚೆನ್ನಯ್ಯ ಸ್ವಾಮಿ ಮಳಮಗಿ ಮಠ. ಶರಣಪ್ಪ ಗುಳಗಿ. ಈಶಪ್ಪಗೌಡ ಮಾಲಿ ಪಾಟೀಲ. ಅಯ್ಯಣ್ಣಗೌಡ ಕ್ಯಾಸಪನಳ್ಳಿ. ಸ್ವಾಮಿದೇವ ದಾಸನಕೇರಿ. ಶೇಖರ ಅರಳಿ. ಸೂರ್ಯಕಾಂತ ಕರದಳ್ಳಿ. ನಾಗಪ್ಪ ಸಜ್ಜನ. ಚೆನ್ನಪ್ಪ ಸಾಹುಕಾರ ಠಾಣಗುಂದಿ. ಇತರರು ಇದ್ದರು.