ಯಾದಗಿರಿ: ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ವಹಿಸಲು ಕಂಟ್ರೋಲ್ ರೂಮ್ ಪ್ರಾರಂಭ

ಲವೀಶ್ ಒರಡಿಯಾ
ಯಾದಗಿರಿ: ಕುಡಿಯುವ ನೀರಿನ ಸಮಸ್ಯೆ ಕುರಿತು ದಾಖಲಾಗುವ ದೂರುಗಳಿಗೆ ಕ್ರಮ ವಹಿಸಲು ಕಂಟ್ರೋಲ್ ರೂಮ್ ಪ್ರಾರಂಭಿಸಿ, ಅದರ ನಿರ್ವಹಣೆಗೆ ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.
ಬೇಸಿಗೆ ಕಾಲ ಹಿನ್ನೆಲೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮತ್ತು ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಿನ 3 ತಿಂಗಳುಗಳ ಕಾಲ ಸಹಾಯವಾಣಿ ಪ್ರಾರಂಭಿಸಿದೆ. ಅವಶ್ಯವಿರುವುದು ಕಂಡು ಬಂದಿರುವುದರಿಂದ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಅನುಬಂಧ-1 ತಾಲೂಕುವಾರು ನೋಡಲ್ ಅಧಿಕಾರಿಗಳು ವಿವರ : ಯಾದಗಿರಿ ತಾಲೂಕ ಸಹಾಯಕ ನಿರ್ದೇಶಕರು (ಪಂ.ರಾಜ್) ಮೌಲಾಲಿ ಮೊ.ನಂ. 9535797806. ಗುರುಮಠಕಲ್ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು (ಪಂ.ರಾಜ್) ಶ್ರೀ ಶರಣಪ್ಪ ಮೈಲಾರಿ ಮೊ.ನಂ.6360438486. ವಡಗೇರಾ ತಾಲೂಕ ಯೋಜನಾಧಿಕಾರಿಗಳು ಶ್ರೀ ರಾಘವೇಂದ್ರ ಮೊ.ನಂ. 9902424938. ಶಹಾಪೂರ ತಾಲೂಕ ಯೋಜನಾಧಿಕಾರಿಗಳು ಶ್ರೀ ಸುಬ್ಬರಾಯ ಚೌದ್ರಿ ಮೊ.ನಂ. 7676667910. ಸುರಪುರ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು (ಪಂ.ರಾಜ್) ಮೊ.ನಂ. 9880028701. ಹುಣಸಗಿ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು (ಪಂ.ರಾಜ್) ಶ್ರೀ ಮಲ್ಲಿಕಾರ್ಜುನ ಕೋರಿ ಮೊ.ನಂ.7899540765 ಸಂಪರ್ಕಿಸಬಹುದು.
ಅನುಬಂಧ-2 ತಾಲೂಕುವಾರು ಸಹಾಯವಾಣಿ ಸಬ್ಬಂದಿಗಳ ವಿವರ : ಯಾದಗಿರಿ ತಾಲೂಕ ಪಂಚಾಯತ ವಿಷಯ ನಿರ್ವಾಹಕರು ಹಾಗೂ ಕಾರ್ಯದರ್ಶಿ ಸಾಯಿಕುಮಾರ ಗ್ರೇಡ್-2 ಮೊ.ನಂ.7353135431. ಗುರುಮಠಕಲ್ ತಾಲೂಕ ಪಂಚಾಯತ ವಿಷಯ ನಿರ್ವಾಹಕರು ಹಾಗೂ ಕಾರ್ಯದರ್ಶಿ ಶಿವಶರಣಪ್ಪ ಗ್ರೇಡ್-2 ಮೊ.ನಂ.9916528358. ವಡಗೇರಾ ತಾಲೂಕ ಪಂಚಾಯತ ವಿಷಯ ನಿರ್ವಾಹಕರು ಹಾಗೂ ಕಾರ್ಯದರ್ಶಿ ಗ್ರೇಡ್-2 ಕುಮಾರಿ ಜ್ಞಾನದೇವಿ ಮೊ.ನಂ.8971326059, ಶಹಾಪೂರ ತಾಲೂಕ ಪಂಚಾಯತ್ ವಿಷಯ ನಿರ್ವಾಹಕರು ಹಾಗೂ ಪಿಡಿಓ ಶ್ರೀ ಈಶರಪ್ಪ ಮೊ.ನಂ.9731041470, ಸುರಪುರ ತಾಲೂಕ ಪಂಚಾಯತ ದ್ವಿತೀಯ ದರ್ಜೆ ಸಹಾಯಕ ವಿಜಯಕುಮಾರ ಜೋಶಿ ಮೊ.ನಂ.9663924936, ಹುಣಸಗಿ ತಾಲೂಕ ಪಂಚಾಯತ್ ವಿಷಯ ನಿರ್ವಾಹಕರು ಹಾಗೂ ಕಾರ್ಯದರ್ಶಿ ಗ್ರೇಡ್-2 ಶ್ರೀ ಪರಮಣ್ಣ ಎಸ್.ಹೂಗಾರ ಮೊ.ನಂ.9731093107ಗೆ ಸದರಿ ನಿಯುಕ್ತಿಗೊಳಿಸಲಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ದೂರವಾಣಿ ಸಂಖ್ಯೆಗಳನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು.
ಸಾರ್ವಜನಿಕರಿಂದ ಸ್ವೀಕೃತವಾಗುವ ಕರೆಗಳಿಗೆ ಸ್ಪಂದಿಸಿ ಸೂಕ್ತವಾದ ವರದಿ ನೀಡಬೇಕು, ಹಾಗೂ ದಾಖಲಾದ ದೂರುಗಳ ಮಾಹಿತಿಯನ್ನು ರೆಜಿಸ್ಟರ್ದಲ್ಲಿ ನಮೂದಿಸಿ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿ, ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿಯನ್ನು ಈ ಕಾರ್ಯಾಲಯಕ್ಕೆ ಸಲ್ಲಿಸಬೇಕು, ತಪ್ಪಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಯಾದಗಿರಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜಹೀರ್ ಉಲ್ ಹಸನ್ ಸಮ್ದಾನಿ ಮೊ.ನಂ.9916564444ಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ತಾಲೂಕುವಾರು ದಾಖಲಾಗುವ ದೂರುಗಳ ಪಟ್ಟಿ ಮತ್ತು ತೆಗೆದುಕೊಂಡ ಕ್ರಮಗಳ ಕುರಿತು ಕಾಲ ಕಾಲಕ್ಕೆ ವರದಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.