ಯಾದಗಿರಿ: ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಲು ರೈತ ಸಂಘ ಮನವಿ

ಯಾದಗಿರಿ/ ಸುರಪುರ: ತಾಲೂಕಿನಾದ್ಯಂತ ಸರಕಾರ ತೊಗರಿ ಖರೀದಿ ಕೇಂದ್ರಗಳ ಆರಂಭಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಾಮೂಹಿಕ ನಾಯಕತ್ವ ಸಂಘಟನೆ ವತಿಯಿಂದ ಸುರಪುರ ನಗರದ ತಹಶೀಲ್ದಾರ್ ಕಚೇರಿ ಬಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಯಲ್ಲಿ ತೊಗರಿ ಖರೀದಿ ಮಾಡುತ್ತಿದ್ದು ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ ಆದ್ದರಿಂದ ಸರ್ಕಾರ ಕನಿಷ್ಠ 8 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಬೆಲೆಗೆ ತೊಗರಿ ಕೇಂದ್ರಗಳನ್ನು ಆರಂಭಿಸಿ ಖರೀದಿಯನ್ನು ಆರಂಭಿಸಬೇಕು, ಇಲ್ಲದಿದ್ದಲ್ಲಿ ಸಂಘಟನೆಯಿಂದ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.
ನಂತರ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಬರೆದ ಮನವಿ ತಹಶೀಲ್ದಾರರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರಾದ ಮಲ್ಲಯ್ಯ ಕಮತಗಿ, ಬುಚ್ಚಪ್ಪ ನಾಯಕ, ಸಂಘದ ತಾಲೂಕ ಅಧ್ಯಕ್ಷ ಹಣಮಂತರಾಯ ಮಡಿವಾಳ, ಸಾಹೇಬಗೌಡ ಮದಲಿಂಗನಾಳ, ಲೋಹಿತ್ ಕುಮಾರ್ ಮಂಗಿಹಾಳ, ವೆಂಕಟೇಶ ಕುಪ್ಪಗಲ್, ತಿಪ್ಪಣ್ಣ ಚಂದಲಾಪುರ, ತಿಮ್ಮಯ್ಯ ತಳವಾರ, ಮರೆಪ್ಪ ನಗರಗುಂಡ, ಬುಡೇಸಾಬ್ ಪಿಂಜಾರ, ಬಾಲರಾಜ್ ಅಂಬಿಗೇರ, ತಿರುಪತಿ ಚೌವ್ಹಾಣ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.