ಯಾದಗಿರಿಯಲ್ಲಿ ಹೋಳಿ ಹಬ್ಬ ಆಚರಣೆ

ಸುರಪುರ: ನಗರದಾದ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗಿದೆ. ಹೋಳಿ ಹಬ್ಬದ ಅಂಗವಾಗಿ ನಗರದ ಕಬಾಡಗೇರಾ, ಪಾಂಡುರಂಗ ದೇವಸ್ಥಾನ, ರಂಗಂಪೇಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಮ ದಹನ ಮಾಡಲಾಗಿದೆ.
ಬೆಳಿಗ್ಗೆಯಿಂದಲೂ ಜನರು ತಂಡೋಪ ತಂಡವಾಗಿ ಪರಸ್ಪರ ಬಣ್ಣವನ್ನು ಎರಚುತ್ತಾ ತಮಟೆಯನ್ನು ಬಾರಿಸುತ್ತ ಮನೆ ಮನೆಗಳಿಗೂ ಭೇಟಿ ನೀಡಿ ಬಣ್ಣ ಹಾಕುವ ಜೊತೆಗೆ ಹೋಳಿ ಹಬ್ಬದ ಶುಭಾಶಯಗಳು ಕೋರಿ ಕುಣಿದು ಕುಪ್ಪಳಿಸಿದರು.
ಜನರು ಬಣ್ಣದಲ್ಲಿ ಮಿಂದೆದ್ದು ಸಾಯಂಕಾಲದ ವೇಳೆಗೆ ಕಬಾಡಗೇರದಲ್ಲಿ ರತಿ ಮನ್ಮಥರ ಪೂಜೆಯನ್ನು ಕೂಡ ನಡೆಸಲಾಯಿತು. ಮಕ್ಕಳು ಡಬ್ಬಿಗಳಲ್ಲಿ ಬಣ್ಣವನ್ನು ತುಂಬಿಕೊಂಡು ಪರಸ್ಪರ ಬಣ್ಣ ಎರಚ್ಚುತ್ತಾ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
Next Story