ಯಾದಗಿರಿ: ಸಚಿವ ಸತೀಶ ಜಾರಕಿಹೊಳಿಗೆ ಅಭಿಮಾನಿ ಬಳಗದಿಂದ ಸನ್ಮಾನ
ಯಾದಗಿರಿ: ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸುರಪುರ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ತಾಲೂಕ ಘಟಕ ದಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಮೂರ್ತಿಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಸಾಹೇಬಗೌಡ ವಾಗಣಗೇರಾ, ಹಿರಿಯ ಮುಖಂಡ ಪಕೀರಪ್ಪಗೌಡ ವಾಗಣಗೇರಾ, ಮಲ್ಲಿಕಾರ್ಜುನ ವಾಗಣಗೇರಾ, ವಕೀಲರಾದ ಅಪ್ಪಣ್ಣ ಗಾಯಕವಾಡ, ರವಿ ನಾಯಕ, ಇಮಾಮಸಾಬ್ ಅರಕೇರಿ, ಮಾನಪ್ಪ ಶೆಳ್ಳಗಿ, ಭಾಗನಾಥ ಗುತ್ತೇದಾರ, ಹುಸನಪ್ಪ ಶೆಳ್ಳಗಿ ಸೇರಿದಂತೆ ಅನೇಕರಿದ್ದರು.
Next Story