ಯಾದಗಿರಿ: ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಆಗ್ರಹಿಸಿ ಪ್ರಾಂತ ಕೃಷಿ ಕೂಲಿಕಾರರ ಧರಣಿ

ಸುರಪುರ: ಉದ್ಯೋಗ ಖಾತ್ರಿ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕ ಘಟಕ ದಿಂದ ನಗರದ ತಾಲೂಕ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನದಾಫ್ ಮಾತನಾಡಿ,ಫಾರಂ ನಂಬರ್ 6 ಸ್ವೀಕೃತಿ ಕೊಡಬೇಕು,ಹೊಸ ಜಾಬ್ ಕಾರ್ಡ್ ಮಾಡಿ ಕೊಡಬೇಕು,ಡಿಲೀಟ್ ಆಗಿರುವ ಜಾಬ್ ಕಾರ್ಡ್ ಪುನಃ ಮಾಡಿ ಕೊಡಬೇಕು,ಮೇಟಿಯ ನೊಂದಣಿ ಮಾಡಬೇಕು, ಸತತವಾಗಿ ನೂರು ಮಾನವ ದಿನಗಳ ಕೆಲಸ ನೀಡಬೇಕು,ನಿವೇಶನ ಇಲ್ಲದ ಕಾರ್ಮಿಕರಿಗೆ ನಿವೇಶನ ಕೊಡಬೇಕು, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಮನೆಗಳ ಕೊಡಬೇಕು, ಯಕ್ತಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಲ್ದಾಳ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕಚಕನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಿಪಿಎಸ್ ಆದ ಮನೆಗಳನ್ನು ತಕ್ಷಣ ಅನುಮೋದನೆ ನೀಡಬೇಕು, ಆಲ್ದಾಳ, ನಾಗರಾಳ, ಬೋನಾಳ, ಮುಷ್ಠಳ್ಳಿ, ಶೆಳ್ಳಗಿ, ಶಾಂತಪೂರ, ಚಂದಲಾಪೂರ, ಹೆಗ್ಗನದೊಡ್ಡಿ, ಬಾಚಿಮಟ್ಟಿ, ಕೆ.ತಳ್ಳಳ್ಳಿ,ಕವಡಿಮಟ್ಟಿ ಪೇಠ ಅಮ್ಮಾಪುರ ಗ್ರಾಮಗಳ ಕೂಲಿ ಕಾರ್ಮಿಕರಿಗೆ ಕೂಡಲೇ ಕೆಲಸ ಕೊಡಬೇಕು.ಏವೂರ ಗ್ರಾಮದ ಕೂಲಿಕಾರರ ಅರಣ್ಯ ಅಧಿಕಾರಿಗಳು ಎನ್.ಎಮ್.ಆರ್ ತೆಗೆದುಕೊಡುವುದು,ಕೆಲಸ ಮಾಡಿದ್ದರು ಸಹ ಎನ್.ಎಮ್.ಆರ್ ಜಿರೋ ಮಾಡಿದು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ನಂತರ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿಯನ್ನು ಸಿರಸ್ತೆದಾರ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ತಾಲೂಕ ಅಧ್ಯಕ್ಷ ಶರಣಬಸವ ಜಂಬಲದಿನ್ನಿ,ಜಿಲ್ಲಾ ಕಾರ್ಯದರ್ಶಿ ಅಯ್ಯಪ್ಪ ಅನಸೂರು,ತಾ.ಕಾರ್ಯದರ್ಶಿ ಪ್ರಕಾಶ ಆಲ್ಹಾಳ ಸೇರಿದಂತೆ ನೂರಾರು ಜನ ಕೂಲಿಕಾರರು ಭಾಗವಹಿಸಿದ್ದರು.