ಯಾದಗಿರಿ: ಗೃಹರಕ್ಷಕ ದಳದ ನಿವೃತ್ತ ಅಧಿಕಾರಿ ಯಲ್ಲಪ್ಪ ಹುಲಿಕಲ್ ರಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಯಾದಗಿರಿ/ ಸುರಪುರ: ಕಳೆದ ಅನೇಕ ವರ್ಷಗಳಿಂದ ಗೃಹರಕ್ಷಕ ದಳದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಕಂಪನಿ ಕಮಾಂಡರ್ ಹುದ್ದೆಯಲ್ಲಿದ್ದು ವಯೋ ನಿವೃತ್ತಿ ಹೊಂದಿದ ಯಲ್ಲಪ್ಪ ಹುಲಿಕಲ್ ಅವರಿಗೆ ತಾಲೂಕ ಗೃಹರಕ್ಷಕ ದಳದ ಘಟಕಾಧಿಕಾರಿಗಳ ನೇತೃತ್ವದಲ್ಲಿ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಉದ್ಘಾಟಿಸಿದರು.
ಪೊಲೀಸ್ ಇಲಾಖೆಯ ಎಎಸ್‌ಐ ಮಲ್ಲಿಕಾರ್ಜುನ ಭರಣಿ,ಘಟಕಾಧಿಕಾರಿ ವೆಂಟಕೇಶ್ವರ ಸುರಪುರ,ಫ್ಲಾಟೂನ್ ಕಮಾಂಡರ್ ರಮೇಶ ಅಂಬುರೆ ಸೇರಿದಂತೆ ಶಹಾಪುರ ಘಟಕಾಧಿಕಾರಿಗಳು ಹಾಗೂ ಸುರಪುರ ತಾಲೂಕಿನ ಅನೇಕ ಜನ ಗೃಹರಕ್ಷಕ ದಳದ ಸಿಬ್ಬಂದಿಗಳು ಭಾಗವಹಿಸಿ ಯಲ್ಲಪ್ಪ ಹುಲಿಕಲ್ ಅವರನ್ನು ಸನ್ಮಾನಿಸಿ ನಿವೃತ್ತಿ ನಂತರ ದ ಜೀವನಕ್ಕೆ ಶುಭ ಹಾರೈಸಿದರು.
Next Story