ಸೈದಾಪುರ | ಕರ್ನಾಟಕ ದಲಿತ ಸಂರ್ಘಷ ಸಮಿತಿ ವತಿಯಿಂದ ಶೋಷಿತರ ಸಂಘರ್ಷ ಸಮಾವೇಶ
ಅಸ್ಪೃಶ್ಯತೆ ಪ್ರತಿರೋಧ ಸಮಾವೇಶ ಯಶಸ್ವಿಗೊಳಿಸಿ: ಕಿರದಳ್ಳಿ

ಸೈದಾಪುರ : ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸಂಘರ್ಷ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ಜಿಲ್ಲಾ ಪ್ರಧಾನ ಸಂಚಾಲಕ ಮಾಳಪ್ಪ ಕಿರದಳ್ಳಿ ಕರೆ ನೀಡಿದರು.
ಇತ್ತೀಚೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂರ್ಘಷ ಸಮಿತಿ ವತಿಯಿಂದ ಶೋಷಿತರ ಸಂಘರ್ಷ ದಿನಾಚರಣೆ ಸಮಾವೇಶದ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ದೇಶದಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರೂ ಕೂಡ ಗ್ರಾಮಗಳಲ್ಲಿನ ಅಸ್ಪೃಶ್ಯತೆ ಎನ್ನುವ ಕಾಯಿಲೆ ಮಾತ್ರ ಇಂದಿಗೂ ಕೂಡ ಸಂಪೂರ್ಣವಾಗಿ ವಾಸಿಯಾಗುತ್ತಿಲ್ಲ. ಇಂದು ವಿಶ್ವಮಟ್ಟದಲ್ಲಿ ಭಾರತ ತಲೆ ಎತ್ತಿಕೊಂಡು ವಿಜೃಂಭಿಸುವಂತೆ ಮಾಡಿದ ಹಾಗೂ ತುಳಿತ್ತಕ್ಕೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಾಬಾ ಸಾಹೇಬರು ಸಂವಿಧಾನವೆನ್ನುವ ಗ್ರಂಥವನ್ನು ಬರೆದು ಸಮಾನತೆಯನ್ನು ಸಾರಿದನು.
ಆದರೂ ಆಧುನಿಕತೆಯ ಮಧ್ಯೆಯೂ ಕೂಡ ನಮ್ಮ ಸಮಾಜ ಸಂಪೂರ್ಣವಾಗಿ ಸಮಾಜದಲ್ಲಿ ಎಲ್ಲರ ಒಡಗೂಡಿ ಬಾಳಲು ಸಾಧ್ಯವಾಗುತ್ತಿಲ್ಲ. ನಾವೆಲ್ಲರು ಒಂದೇ ಎನ್ನುವ ಅನೇಕ ನಾಯಕರು, ಧನಿಕರು ಮನೆಯಲ್ಲಿ ಮಾತ್ರ ನಮ್ಮವರನ್ನು ಅಸ್ಪೃಶ್ಯತೆಯಿಂದ ಕಾಣುತ್ತಾರೆ. ಅಸ್ಪೃಶ್ಯತೆಯನ್ನು ಬೇರು ಸಮೇತ ಕಿತ್ತುಹಾಕುವ ಜಾಗೃತ ಸಮಾವೇಶವನ್ನು ಮಾ.24ರ ಸೋಮವಾರ ಶಹಾಪುರದ ವೈಷ್ಣವಿ ಫಂಕ್ಷನ್ ಹಾಲ್‌ನಲ್ಲಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ಸಮಾವೇಶ ಜರಗುವುದು. ಆದ್ದರಿಂದ ಈ ಭಾಗದ ನಮ್ಮ ಜನರು ಈ ಜಾಗೃತಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಸಂಚಾಲಕ ಮರಳ ಸಿದ್ದಪ್ಪ ನಾಯ್ಕಲ್, ಜಿಲ್ಲಾ ಸಂಘಟನಾ ಸಂಚಾಲಕರಾದ ಮರಿಲಿಂಗಪ್ಪ ಬದ್ದೇಪಲ್ಲಿ, ಭೀಮರಾಯ ಬಳಿಚಕ್ರ, ಬಸವರಾಜ ಅಣಬಿ, ಪರಶುರಾಮ ರೋಜಾ, ನಿಂಗಪ್ಪ ಬೀರನಾಳ, ದೇವಿಂದ್ರಪ್ಪ ಕೂಡ್ಲೂರು, ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.