ಯಾದಗಿರಿ: ಕುಂಬಾರ ಸಂಘ ಸರ್ವಜ್ಞ ಜಯಂತಿ ಆಚರಣೆ
ತ್ರ‍್ರಿಪದಿಗಳ ಮೂಲಕ ಸಮಾಜ ತಿದ್ದಿದ ಸಂತ ಸರ್ವಜ್ಞ-ರಾಜು ಕುಂಬಾರಕುಂಬಾರ

ಸುರಪುರ: ತಮ್ಮ ತ್ರಿಪದಿಯ ವಚನಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದ ಮಹಾನ್ ಸಂತ ವಚನಕಾರ ಕವಿ ಸರ್ವಜ್ಞನಾಗಿದ್ದಾನೆ ಎಂದು ಸುರಪುರ ತಾಲೂಕ ಕುಂಬಾರ ಸಂಘದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿದರು.
ನಗರದ ರಂಗಂಪೇಟೆಯಲ್ಲಿನ ಸರ್ವಜ್ಞ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು,16ನೇ ಶತಮಾನದಲ್ಲಿ ಮೊದಲಿಗೆ ತ್ರಿಪದಿಗಳ ವಚನ ರಚನೆ ಮಾಡಿ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.ಅವರು ಬರೆದ ಮೂರು ಸಾಲಿನ ವಚನಗಳು ಸರ್ವಕಾಲಿಕವಾಗಿವೆ ಎಂದರು.
ಅಲ್ಲದೆ ಇದೇ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಕುಂಬಾರ ಸಮಾಜಕ್ಕೆ ಹಿರಿಯ ಸಹೋದರರಾಗಿ ನಿಂತು ಸಮಾಜಕ್ಕೆ ಒಂದು ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ, ಅಲ್ಲದೆ ಕುಂಬಾರಿಕೆ ವೃತ್ತಿ ಮಾಡಲು ಸ್ಥಳವನ್ನು ಒದಿಗಿಸಿ ಕೊಟ್ಟಿದ್ದು,ಕುಂಬಾರ ಸಮುದಾಯ ಭವನವನ್ನು ಶೀಘ್ರದಲ್ಲಿ ಶಾಸಕರು ಉದ್ಘಾಟನೆ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸರ್ವಜ್ಞರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಘೋಷಣೆಗಳನ್ನು ಕೂಗಿ ಆಚರಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಅವರ ಪತಿ ಶಕೀಲ್ ಅಹ್ಮದ್ ಖುರೇಷಿ,ನಗರಸಭೆ ಸದಸ್ಯ ನಾಸೀರಹುಸೇನ್ ಕುಂಡಾಲೆ,ನಯೋಪ್ರಾ ಮಾಜಿ ಅಧ್ಯಕ್ಷ ಸೂಗುರೇಶ ವಾರದ್,ಶರಣ ಸೇವಾ ಸಂಸ್ಥೆ ಅಧ್ಯಕ್ಷ ಶಿವರಾಜ ಕಲಕೇರಿ,ಮುಖಂಡರಾದ ಸಂಗಪ್ಪ ಮಲ್ಲಾ, ಈರಣ್ಣ ಜಾಲಹಳ್ಳಿ,ಸಾಹೇಬಗೌಡ ಕುಂಬಾರ,ವೀರಭದ್ರಪ್ಪ ಕುಂಬಾರ,ಆದಪ್ಪ ಕುಂಬಾರ, ಅಮರೇಶ ಜಾಲಹಳ್ಳಿ,ಮಡಿವಾಳಪ್ಪ ಮಲ್ಲೆ,ಪೊಲೀಸ್ ಪೇದೆ ಅಮರೇಶ ಸಿಂಪಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕುಂಬಾರಪೇಟ: ನಗರದ ಕುಂಬಾರಪೇಟದ ಕವಿ ಸರ್ವಜ್ಞನ ನಾಮಫಲಕದ ಬಳಿ ಸರ್ವಜ್ಞ ಜಯಂತಿ ಆಚರಿಸಲಾಗಿದೆ.ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಘೋಷಣೆಗಳನ್ನು ಕೂಗಿ ಆಚರಿಸಲಾಗಿದೆ.ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗುರಿ,ಮಾಜಿ ಸದಸ್ಯ ಮಲ್ಲಣ್ಣ ಹುಬ್ಬಳ್ಳಿ,ಅಯ್ಯಪ್ಪ ಕುಂಬಾರ,ಭೀಮರಾಯ ಕುಂಬಾರ,ಶರಣಪ್ಪ ಪೂಜಾರಿ,ರವಿ ಕುಂಬಾರ,ಸಿದ್ದಪ್ಪ ದಾರಿಮನಿ,ಭೀಮಣ್ಣ ದಾರಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.