ಸುರಪುರ | ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಮನವಿ
ಸುರಪುರ : ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಮಾದಿಗ ಮತ್ತು ಮಾದಿಗ ಉಪ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿನ ಶಾಸಕ ರಾಜಾವೇಣುಗೋಪಾಲ ನಾಯಕ ಅವರ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಳೆದ ಅನೇಕ ವರ್ಷಗಳಿಂದ ಎಲ್ಲಾ ಸರಕಾರಗಳಿಗೆ ಒಳ ಮೀಸಲಾತಿ ಜಾರಿಗಾಗಿ ನಾವು ಪ್ರತಿಭಟನೆ ನಡೆಸಿ ಒತ್ತಾಯಿಸುತ್ತಿದೇವೆ. ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಒಳ ಮೀಸಲಾತಿ ಜಾರಿ ಮಾಡುವಂತೆ ಆದೇಶ ನೀಡಿದೆ, ಆದರೆ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಆದ್ದರಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಮ್ಮ ಮನವಿಯನ್ನು ಸರಕಾರದ ಗಮನಕ್ಕೆ ತರುವಂತೆ ವಿನಂತಿಸುವುದಾಗಿ ತಿಳಿಸಿದರು.
ನಂತರ ಶಾಸಕರ ಸಹೋದರ ರಾಜಾ ಸಂತೋಷಕುಮಾರ ನಾಯಕ ಅವರ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಭೀಮಾಶಂಕರ ಬಿಲ್ಲವ್, ಮಲ್ಲಿಕಾರ್ಜುನ ಬಿಲ್ಲವ್, ಮರೆಪ್ಪ ಬಸ್ಸಾಪುರ, ಮಲ್ಲಿಕಾರ್ಜುನ ಮಂದಾಲೆ, ಬಾಬು ವಾಗಣಗೇರಾ, ಭೀಮಣ್ಣ ಕಡಿಮನಿ, ಹಣಮಂತ ಬಿಲ್ಲವ್, ಬಸವರಾಜ ಹಾದಿಮನಿ, ಕಾಂತಪ್ಪ ದಿವಳಗುಡ್ಡ, ಭೀಮಣ್ಣ ಕಡಿಮನಿ, ಬಸವರಾಜ ಮುಷ್ಠಳ್ಳಿ ಡಿ.ಸಿ,ಮಹೇಶ ಜಾಲಿಬೆಂಚಿ, ಮಲ್ಲಿಕಾರ್ಜುನ ಲಕ್ಷ್ಮೀಪುರ, ಮಲ್ಲಿಕಾರ್ಜುನ ವಾಗಣಗೇರಾ, ಭೀಮರಾಯ ತೆಳಗಿನಮನಿ, ಹಣಮಂತ ದೇವಿಕೇರಾ, ಅಂಬ್ರೇಶ ಮ್ಯಾಗೇರಿ, ಕೃಷ್ಣ ಕಡಿಮನಿ,ಸುಭಾಷ ಮಾರಲಬಾವಿ, ಬಸವರಾಜ ತೋಟದವರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.