ಸುರಪುರ | ಕಚಕನೂರು ಪಂಚಾಯತ್‌ನಲ್ಲಿ ಅವ್ಯವಹಾರ ಆರೋಪ : ತನಿಖೆಗೆ ಆಗ್ರಹ
ಯಾದಗಿರಿ : ಸುರಪೂರ ತಾಲ್ಲೂಕು ಪಂಚಾಯತ್ ವ್ಯಾಪ್ತಿಯ ಕಚಕನೂರು ಗ್ರಾಮ ಪಂಚಾಯತ್‌ನಲ್ಲಿ ಕರವಸೂಲಿಗಾರ ಹುದ್ಧೆಯನ್ನು ಅಕ್ರಮವಾಗಿ ನೇಮಕಮಾಡಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸುತ್ತಿರುವದನ್ನು ರದ್ದುಗೋಳಿಸಿ ಸರ್ಕಾರಿ ನಿಯಮನುಸಾರವಾಗಿ ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸಿ ಕಾರ್ಯನಿವಾಹಕ ಅಧಿಕಾರಿಗೆ ಮೂಲನಿವಾಸಿ ಅಂಬೇಡ್ಕರ್ ಸಂಘದ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ ಮಾತನಾಡಿ, ಪಂಚಾಯತ್‌ನಲ್ಲಿ 2021-22 ರಿಂದ ಇಲ್ಲಿಯವರೆಗೆ ನಿಯಮನುಸಾರವಾಗಿ ಯಾವುದೇ ಕರವಸೂಲಿಗಾರ ಹುದ್ಧೆಯನ್ನು ಆಯ್ಕೆಮಾಡಿಕೊಳ್ಳುವ ಪ್ರಕ್ರೀಯೆ ಪ್ರಾಂಭಿಸಿಲ್ಲ. ಯಾವುದೇ ರೀತಿ ನೋಟಿಫಿಕೆಶೆನ್ ಹೊರಡಿಸಿ ಪತ್ರಿಕೆಯಲ್ಲಿ ಅರ್ಜಿ ಆಹ್ವಾನ ಮಾಡಬೇಕು, ಆದರೆ ಖಾಸಗಿ ವ್ಯಕ್ತಿಯೊಬ್ಬ ಗ್ರಾಮ ಪಂಚಾಯತ್ ಸಿಬ್ಬಂದಿ ಅಲ್ಲದಿದ್ದರೂ ಕಾನೂನಬಾಹಿರವಾಗಿ ಗ್ರಾಮ ಪಂಚಾಯತ್ಗೆ ಬಂದು ಸಿಬ್ಬಂದಿಗಳ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವುದಾಗಿ ಆರೋಪಿಸಿದ್ದಾರೆ.
ಪಂಚಾಯತ್ ಅಭಿವೃದ್ದಿ ಅಧಿಕಾರಿಗಳೇ ನೇರವಾಗಿ ಕಾನೂನನ್ನು ಉಲ್ಲಂಘನೆ ಮಾಡುವಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಹಿಂದೆ ಹಲವು ಬಾರಿ ಲಿಖಿತವಾಗಿ ಸಾರ್ವಜನಿಕರು ಕೇಳಿದರೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೇನು ಇಲ್ಲ ಸಹಿಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಗ್ರಾಮ ಪಂಚಾಯತ್ನಲ್ಲಿ ಅಭಿವೃದ್ಧಿ ಕೆಲಸಗಳು ಆಗದೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಇದರಲ್ಲಿ ಅಭಿವೃದ್ಧಿ ನಿರ್ಲಕ್ಷ ಮತ್ತು ಕರ್ತವ್ಯಲೋಪ ಎದ್ದು ಕಾಣುತ್ತಿದೆ ಹಾಗಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ತಪ್ಪು ಮಾಡಿರುವ ಪಿ.ಡಿಓ ರವರನ್ನು ಕೂಡಲೇ ಅಮಾನತು ಮಾಡಿ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿ ಕಡೆ ಗಮನಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯಕಾಯಾನಿವಾಹಕ ಅಧಿಕಾರಿಗಳು ನಿಯಮ ಬಾಹಿರವಾಗಿ ಸಲ್ಲಿಸಿರುವ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಕರವಸೂಲಿಗಾರ ಹುದ್ದೆ ಸೇರಿದಂತೆ ಖಾಲಿ ಇರುವ ಹುದ್ಧೆಗಳ ನೇಮಕಾತಿಗಾಗಿ ಕೂಡಲೇ ಕ್ರಮವಹಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಶಾಂತಪ್ಪ ದೇವರಗೋನಾಲ್, ಸಿದ್ರಾಮ್ ಹಾಲಭಾವಿ, ಶ್ರೀರಾಮ್ ಧೇವರಗೋನಾ, ಅವಿನಾಶ ಹೊಸಮನಿ, ಚಂದಪ್ಪ ಪಂಚಮ್, ಭಿಮಶಂಕರ ಹೊಸಮನಿ, ಸತೀಶ ಯಡಿಯಾಪೂರ, ಹಣಮಂತ ಕೊಡ್ಲಿ, ಶರಣಪ್ಪ ಬಿ.ಹುಲಿಮನಿ, ಮುತ್ತು ಕಂಬಾರ ಇದ್ದರು.