ಸುರಪುರ | ಮಾಜಿ ಸಚಿವ ರಾಜುಗೌಡ ಜನ್ಮ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ
ಸುರಪುರ : ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ವರ್ಷವೂ ನಮ್ಮ ಜನ್ಮ ದಿನಚಾರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅದರಂತೆ ಈ ಬಾರಿ ರಕ್ತದಾನ ಶಿಬಿರ ನಡೆಸುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯ ಆವರಣದಲ್ಲಿ ರಾಜುಗೌಡ ಹಾಗೂ ಅವರ ಸಹೋದರ ಹಣಮಂತ ನಾಯಕ ಬಬ್ಲುಗೌಡ ಅವರ ಜನುಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ʼರಕ್ತದಾನ ಶಿಬಿರʼ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಕಾರ್ಯಕರ್ತರ ಕಾರ್ಯಕ್ಕೆ ನಾನು ಋಣಿಯಾಗಿದ್ದೇನೆ, ಇಂತಹ ಅಭಿಮಾನಿಗಳು ಸಿಗುವುದು ತುಂಬಾ ಕಷ್ಟ, ಎಲ್ಲಾ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ರಾಜಾ ಮುಕುಂದ ನಾಯಕ,ವೇಣುಮಾಧವ ನಾಯಕ,ರಾಜಾ ರಂಗಪ್ಪ ನಾಯಕ,ಬಸನಗೌಡ ಪಾಟೀಲ್ ಹಳ್ಳಿಕೋಟಿ, ಬಸವರಾಜಸ್ವಾಮಿ ಸ್ಥಾವರಮಠ, ಹೆಚ್.ಸಿ.ಪಾಟೀಲ್, ಕಿಟ್ಟಪ್ಪ ಸಾಹುಕಾರ,ಸೋಮನಾಥ ಡೊಣ್ಣಿಗೇರ, ಮಹೇಶ ಪಾಟೀಲ್, ಶರಣು ನಾಯಕ ಬೈರಿಮಡ್ಡಿ, ಭೀಮಣ್ಣ ದರಬಾರಿ, ವಿಷ್ಣು ಗುತ್ತೇದಾರ, ಮಣಿಕಂಠ ನಾಯಕ, ಶಂಕರ ನಾಯಕ,ರಾಜಾ ಜೈರಾಮ ನಾಯಕ,ಅಭಿಜಿತ್ ದರಬಾರಿ, ಮಲ್ಲು ದಂಡಿನ್, ದೇವರಾಜ ಮಕಾಶಿ, ಈಶ್ವರ ನಾಯಕ, ಶ್ರೀನಿವಾಸ ನಾಯಕ ದರಬಾರಿ, ಅರವಿಂದ ಬಿಲ್ಲವ್,ಹೊನ್ನಪ್ಪ ತಳವಾರ, ಮಲ್ಲು ವಿಷ್ಣುಸೇನಾ, ಜಗದೀಶ ಪಾಟೀಲ್,ಲಕ್ಷ್ಮೀಕಾಂತ ದೇವರಗೋನಾಲ, ಶಿವಶರಣಪ್ಪ ಹೆಡಗಿನಾಳ, ಶಾಂತಗೌಡ ಎಸ್.ಡಿ ಗೋನಾಲ, ಮಾನಪ್ಪ ಚಳ್ಳಿಗಿಡ,ಶಿವರುದ್ರ ಉಳ್ಳಿ,ಶರಣು ಹಸನಾಪುರ,ಸೂಗು ಮೋದಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.