ಯಾದಗಿರಿ: ಅರ್ಬನ್ ಕೋ ಆಪರೇಟಿವ್ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಸುರಪುರ: ನಗರದ ಸುರಪುರ ಅರ್ಬನ್ ಕೋ ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಕ್ಕಾಗಿ ಚುನಾವಣೆ ನಡೆಯಿತು.
ಚುನಾವಣಾಧಿಕಾರಿ ರವಿಕುಮಾರ ಗೋಗಿ ಅವರು ಪ್ರಕ್ರಿಯೆ ಆರಂಭಿಸುತ್ತಿದ್ದಂತೆ, ಅಧ್ಯಕ್ಷ ಸ್ಥಾನಕ್ಕೆ ರಾಜಾ ವಿಜಯಕುಮಾರ ನಾಯಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಾರಪ್ಪ ಗುತ್ತೇದಾರ ಅವರು ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಒಂದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇಬ್ಬರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಜ್ಞಾನಚಂದ್ ಜೈನ್,ವೆಂಕೋಬ ಯಾದವ್,ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ),ಮಲ್ಲಣ್ಣ ಸಾಹು ಮುಧೋಳ,ಮಹಿಬೂಬ ಒಂಟಿ,ಅಬ್ದುಲ್ ಗಫೂರ್ ನಗನೂರಿ,ರಾಜಾ ಸುಶಾಂತ ನಾಯಕ,ಭಂಡಾರೆಪ್ಪ ನಾಟೇಕಾರ್,ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ,ಅಬೀದ್ ಹುಸೇನ್ ಪಗಡಿ,ಶಕೀಲ್ ಅಹ್ಮದ್,ಮಂಜುನಾಥ ಸಪ್ಪಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story