ಕುಮಾರಸ್ವಾಮಿಯಿಂದ ಮತದಾರರ ಬ್ಲಾಕ್ ಮೇಲ್: ಸಚಿವ ದರ್ಶನಾಪುರ ಆರೋಪ
ಯಾದಗಿರಿ: ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿದರೆ ನೀರಾವರಿ ವಿಚಾರ ಮಾತನಾಡುತ್ತೇನೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದು ಮತದಾರರನ್ನು ಬ್ಲಾಕ್ ಮೇಲ್ ಮಾಡುವ ತಂತ್ರ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಆರೋಪಿಸಿದ್ದಾರೆ.
ಬುಧವಾರ ಶಹಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ಚುನಾವಣೆಯಲ್ಲಿ ಓಟು ಹಾಕಲಿ ಬಿಡಲಿ ನಾವು ಯಾವಾಗಲೂ ಜನರ ಕೆಲಸ ಮಾಡಿ ಕೊಟ್ಟಿದ್ದೇವೆ, ಕಾಂಗ್ರೆಸ್ ಪಕ್ಷ ಯಾವಾಗಲೂ ಜನರಿಗೆ ಬ್ಲಾಕ್ ಮೇಲ್ ಮಾಡುವ ಕೆಲಸ ಮಾಡಿಲ್ಲ ಎಂದ ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ ಏನು ಕೆಲಸ ಮಾಡಿದೆ ಅಂತ ಕೇಳುತ್ತಾರೆ, ಕಾಂಗ್ರೆಸ್ ಸರ್ಕಾರವೇ ರೈತರಿಗೆ ದೊಡ್ಡ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಬಿಜೆಪಿಯವರು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲ್ಲ, ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟು ಅದನ್ನೇ ದೊಡ್ಡದು ಮಾಡುತ್ತಾರೆ ಎಂದರು.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಬಹಳ ಸಾಚಾವೇ, ಕುಮಾರಸ್ವಾಮಿ ಮಂದಿ ಬಗ್ಗೆ ಜನ ಸಾಕಷ್ಟು ಮಾತನಾಡುತ್ತಾರೆ. ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿನ್ನು ಹೋಲಿಸಲು ಸಾಧ್ಯನಾ?, ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆದಾಗ ವೆಸ್ಟ್ಯಾಂಡ್ ಹೋಟೆಲ್ ಅಲ್ಲಿ ಕುಳಿತು ಅಧಿಕಾರ ಮಾಡಿದ್ದಾರೆ. ಅವರಿಗೆ ನಮ್ಮ ಪಕ್ಷ ಹಾಗೂ ಮುಖಂಡರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.
ಜೆಡಿಎಸ್ ರವರು ತಾವು ಸೆಕ್ಯೂಲರ್ ಎಂದು ಹೇಳುತ್ತಾರೆ. ಇವಾಗ ನಾವು ಸೆಕ್ಯೂಲರ್ ಇಲ್ಲ ಅಂತ ಹೇಳ್ತಾ ಇದ್ದಾರೆ, ಇದನ್ನು ಮೊದಲೇ ಹೇಳಬೇಕಿತ್ತು ಎಂದರು
ಇವರ ಮನೆಯಷ್ಟು ಮಂದಿ ರಾಜಕೀಯ ಮಾಡುತ್ತಾರೆ, ಇವರಿಗೆ ಬೇರೆಯವರು ಯಾರು ಸಿಗಲ್ವಾ ಎಂದು ಪ್ರಶ್ನಿಸಿದ ಸಚಿವ ದರ್ಶನಾಪುರ, ಸುಮಾರು 20 25 ಮಂದಿ ಅವರ ಕುಟುಂಬಸ್ಥರೇ ಎಂಎಲ್ಎಸಿ, ಎಂಎಲ್ಎ, ರಾಜ್ಯಸಭಾ ಸದಸ್ಯರು ಇದ್ದರೆ ಬೇರೆಯವರ ಕಥೆ ಏನು.? ಹಾಗಾಗಿ ಜೆಡಿಎಸ್ ಪಕ್ಷ ಇವತ್ತು ಈ ಗತಿ ತಲುಪಿದೆ ಎಂದರು.
ಅವರ ಕುಟುಂಬದವರು ಚನ್ನಪಟ್ಟಣ ಶಾಸಕರಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ? ಇದೀಗ ದೇವೇಗೌಡರಿಗೆ ಬ್ಲಾಕ್ ಮೇಲ್ ಮಾಡಿ ಚನ್ನಪಟ್ಟಣ ಪ್ರಚಾರಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವಯಸ್ಸಿನಲ್ಲಿ ದೇವೇಗೌಡರನ್ನು ಕರೆದುಕೊಂಡು ಪ್ರಚಾರ ಮಾಡುವ ಅವಶ್ಯಕತೆ ಏನಿದೆ. ಇವರು ಅಷ್ಟು ವರ್ಚಸ್ಸು ಇದ್ದರೆ ತಿರುಗಾಡದೆ ಚುನಾವಣೆ ಗೆಲ್ಲಲಿ ಎಂದು ಸವಾಲು ಹಾಕಿದರು.