ಯಾದಗಿರಿ | ಸಮ್ಮೇಳನ ದಿನದಂದು ಸರಕಾರಿ ನೌಕರರ ನೋಂದಣಿಗೆ ಅವಕಾಶ : ಸಿದ್ದಪ್ಪ ಎಸ್.ಹೊಟ್ಟಿ
ಯಾದಗಿರಿ : ಮಂಡ್ಯದಲ್ಲಿ ಡಿ.22 ರಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳನ್ನು ಆನ್ ಲೈನ್ ಮೂಲಕ ನೋಂದಾಯಿಸಿ ಕೊಳ್ಳಲಾಗಿದ್ದು, ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಮುಕ್ತಾಯವಾಗಿದೆ.
ಆದರೆ ಸರಕಾರಿ ನೌಕರರು ಆನ್ ಲೈನ್ ಮೂಲಕ ನೋಂದಣಿ ಆಗದಿದ್ದರೂ ಸಹ ಸಮ್ಮೇಳನದಲ್ಲಿ ಭಾಗವಹಿಸಬಹುದು. ನೌಕರರು ಸಮ್ಮೇಳನದ ದಿನ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ಹಾಜರಾತಿ ಪ್ರಮಾಣ ಪತ್ರವನ್ನು (ಓಓಡಿ) ಪಡೆಯಬಹದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Next Story