ಯಾದಗಿರಿ | ಚಂದಾಪುರ ಶಾಲೆಯ ಕೌಶಲ್ಯ ರಾಜ್ಯಮಟ್ಟಕ್ಕೆ ಆಯ್ಕೆ
ಯಾದಗಿರಿ/ ಶಹಾಪುರ : ಇಂದು ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಹಾಪುರ ತಾಲೂಕಿನ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಚಂದಾಪುರ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕೌಶಲ್ಯ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಭಂದ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಹಾಗೆ ಪ್ರೌಢ ಶಾಲೆ ವಿಭಾಗದಲ್ಲಿ 10ನೇ ತರಗತಿಯ ವಿದ್ಯಾರ್ಥಿ ಉಮೇಶ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ.
ಮುಖ್ಯ ಗುರುಗಳಾದ ಶಿವಪ್ಪ ಬಿರಾದಾರ ಮತ್ತು ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಅಯ್ಯಣ್ಣ ಹೊಸಮನಿ ಮತ್ತು ಸಹ ಶಿಕ್ಷಕರ ವೃಂದದವರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ,ಚಂದಾಪುರ ಗ್ರಾಮದ ಶಿಕ್ಷಣ ಪ್ರೇಮಿಗಳು ಮತ್ತು ದರ್ಶನಾಪೂರ ಕ್ಲಸ್ಟರಿನ ಸಿ.ಆರ್.ಪಿ ರಾಮನಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.
Next Story