ಯಾದಗಿರಿ | ಅಮೋಘವರ್ಷ ನೃಪತುಂಗ ಜಯಂತಿ ಆಚರಣೆ
ಯಾದಗಿರಿ : ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ವತಿಯಿಂದ ಸುರಪುರ ನಗರದ ಕಚೇರಿಯಲ್ಲಿ ಅಮೋಘವರ್ಷ ನೃಪತುಂಗ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಅಮೋಘವರ್ಷ ನೃಪತುಂಗರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿ ಸಿಹಿ ಹಂಚಿ ವಂದಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ಮುಖಂಡರಾದ ಮಲ್ಲಣ್ಣ ಸಾಹು, ಶಿವಮೋನಯ್ಯ ಎಲ್.ಡಿ.ನಾಯಕ, ಎಸ್.ಡಿ.ನಾಯಕ ದೇವರಗೋನಾಲ, ಮಲ್ಲು ಬಾದ್ಯಾಪುರ, ಬಸನಗೌಡ ಕಮತಗಿ, ತಿರುಪತಿ ಯಂಕಗೋಳ, ಮಾನಪ್ಪ ಕಟ್ಟಿಮನಿ, ನಿಂಗಣ್ಣ ಕುಳಗೇರಿ, ವೆಂಕಟೇಶ ರಾವೂರ, ಮಹೇಶ ಶಾಬಾದಿ, ವಿರೇಶ ಕುಂಬಾರ, ಅಯ್ಯನ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story