ಯಾದಗಿರಿ | ಹೆಲ್ಮೆಟ್ ಧರಿಸುವಂತೆ ಪೊಲೀಸ್ ಇಲಾಖೆಯಿಂದ ಬೈಕ್ ರ್‍ಯಾಲಿ
ಯಾದಗಿರಿ : ಸುರಪುರ ನಗರ ಪೊಲೀಸ್ ಠಾಣೆ ವತಿಯಿಂದ ಡಿವೈಎಸ್ಪಿ ಜಾವೀದ್ ಇನಾಂದಾರ್ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಮತ್ತು ಸಂಚಾರಿ ನಿಯಮಗಳ ಜಾಗೃತಿ ಅಭಿಯಾನ ಬೈಕ್ ರ್‍ಯಾಲಿ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ನಿಮ್ಮ ಜೀವ ಮತ್ತು ನಿಮ್ಮ ಕುಟುಂಬ ರಕ್ಷಿಸಿ ಎಂದು ಭಿತ್ತಿ ಪತ್ರಗಳ ಹಿಡಿದು ನಗರದ್ಯಾಂತ ಬೈಕ್ ರ್‍ಯಾಲಿ ಮೂಲಕ ಜಾಗೃತಿ ಮೂಡಿಸಲಾಯಿತು.
ಪೊಲೀಸ್ ಠಾಣೆಯಿಂದ ಗಾಂಧಿ ಚೌಕ್ ಮಾರ್ಗವಾಗಿ ದರ್ಬಾರ್ ರೋಡ್, ಮೂರ್ತಿ ಕಟ್ಟ ಗೋಪಾಲಸ್ವಾಮಿ ದೇವಸ್ಥಾನ ರೋಡ್, ವಾಲ್ಮೀಕಿ ವೃತ್ತ, ಹನುಮಂತ ಟಾಕೀಸ್ ಮಾರ್ಗ ದಿಂದ ನಗರ ಬಸ್ ನಿಲ್ದಾಣ ಮತ್ತು ರಂಗಂಪೇಟೆ ತಿಮ್ಮಾಪುರ್ ಆರ್ ವಿ ಎನ್ ಸರ್ಕಲ್ ವರಗೆ ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಳ್ಳಬೇಕು, ದೇಶಾದ್ಯಂತ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ವರ್ಷಕ್ಕೆ 1 ಲಕ್ಷ 71 ಸಾವಿರ ಜನ ಅಪಘಾತದಲ್ಲಿ ಮರಣ ಹೊಂದುತ್ತಾ ಇದ್ದಾರೆ ಸಾರ್ವಜನಿಕರು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸತಕ್ಕದ್ದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ತಿಳಿಸಿದರು.
ಸುರಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಆನಂದ್ ವಾಗ್ಮೊಡೆ ಮಾತನಾಡಿ, ಸುರಪುರ ನಗರದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಅಪಘಾತವಾಗಿ ತೆಲೆಗೆ ಪೆಟ್ಟು ಬಿದ್ದು ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದಯಮಾಡಿ ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅತಿ ವೇಗ ಮತ್ತು ಅಲಾಕ್ಷತನದಿಂದ ವಾಹನ ಚಲಾಯಿಸಬಾರದು, ಕುಡಿದು ವಾಹನ ಚಲಾಯಿಸಬಾರದು, ಮೊಬೈಲ್ ಬಳಸುತ್ತ ವಾಹನ ಚಲಾಯಿಸಬಾರದು, ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಯಲ್ಲಿ ವಾಹನ ಚಲಾಯಿಸಲು ಕೊಡಬೇಡಿ, ನಾಲ್ಕು ಚಕ್ರ ವಾಹನ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಅನ್ನು ಧರಿಸಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ನಿಮ್ಮ ಜೀವವನ್ನು ಉಳಿಸಿಕೊಳ್ಳಿ, ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಶಿವರಾಜ್ ಪಾಟೀಲ್ ಕೃಷ್ಣ ಸುಬೇದಾರ್ ಶರಣಪ್ಪ ಹವಾಲ್ದಾರ್ ಹಾಗೂ ಎಎಸ್ಐ ಗಳಾದ ಮಾನಪ್ಪ ಶಾರದಳ್ಳಿ, ಮನೋಹರ್ ರಾಥೋಡ್, ನಾಗಪ್ಪ ಮಾಲಿ ಪಾಟೀಲ್ ಮುಖ್ಯಪೇದೆಗಳಾದ ಶಿವರಾಜ್ ಪಾಣೆಗಾವ್, ಈರಣ್ಣ, ವೆಂಕಟೇಶ್ ಬಲ ಶೆಟ್ಟಿ, ಹಾಳ್ ವೆಂಕಟೇಶ್, ನಗ್ನೂರ್ ಮಹೇಶ್ ತಳವಾರ್, ಮಹಾಂತೇಶ್ ಪೊಲೀಸ್ ಪೇದೆ ಗಳಾದ ಕೆಂಚಪ್ಪ, ಮಹಾದೇವ್, ಸಣ್ಣ ಕುಂಟೆಪ್ಪ, ನಂದಪ್ಪ, ತಾಯಣ್ಣ, ಲಕ್ಷ್ಮಣ್, ಪ್ರಕಾಶ್ ಕುಮಾರ್, ಬಸವರಾಜ್, ನಿಂಗಯ್ಯ, ದಯಾನಂದ್, ಜಮಾದಾರ್ ಗೃಹರಕ್ಷಕ ದಳ ಪ್ಲಟೂನ್ ಕಮಾಂಡರ್ ವೆಂಕಟೇಶ್ ಮಹಿಳಾ ಪೇದೆಗಳಾದ ಗುರಮ್ಮ,, ಕಾವ್ಯ ಭಾಗಿಯಾಗಿದ್ದರು.