ಯಾದಗಿರಿ | ದಲಿತ ಸಂಘರ್ಷ ಸಮಿತಿ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ನೇಮಕ
ಯಾದಗಿರಿ : ಸುರಪುರ ನಗರದ ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಲಕ್ಷ್ಮೀನಾರಾಯಣ ನಾಗವಾರ ಬಣದ ತಾಲ್ಲೂಕು ಘಟಕದ ಸಭೆ ನಡೆಸಿ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಪದಾಧಿಕಾರಿಗಳಾಗಿ ಮಹಮ್ಮದ್ ಗೌಸ್ (ಸಂಚಾಲಕ), ಜಾವಿದ್ ಪಟೇಲ್, ಮಹಮ್ಮದ್ ಸಲೀಂ, ನವಾಜ್ ಶೇಖ್ (ಸಂಘಟನಾ ಸಂಚಾಲಕರು), ತೋಫಿಕ್ (ಖಜಾಂಚಿ), ತೋರಬ್ ಅಲಿ, ಸಲೀಮ್ ಶಹಾ, ಫಾರೂಕ್ ಶಹಾ, ಮಹಮ್ಮದ್ ಗೌಶ್, ಶೇಖ್ ದಾವುದ್ (ಕಾರ್ಯಕಾರಿ ಸಮಿತಿ ಸದಸ್ಯ)ರನ್ನಾಗಿ ನೇಮಕಗೊಳಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘಟನೆ ತಾಲೂಕ ಸಂಚಾಲಕ ಮಾನಪ್ಪ ಶೆಳ್ಳಗಿ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಕೀಲ ಅಪ್ಪಣ್ಣ ಗಾಯಕವಾಡ, ರವಿ ನಾಯಕ ಕಬಾಡಗೇರ, ನಾಗೇಂದ್ರ ದೊರೆ, ಮಲ್ಲಿಕಾರ್ಜುನ ವಾಗಣಗೇರಾ, ಇಮಾಮ್ ಸಾಬ್ ವಾಗಣಗೇರಾ, ಪಕೀರಪ್ಪ ವಾಗಣಗೇರಾ, ಸಾಹೇಬಗೌಡ ವಾಗಣಗೇರಾ, ಅಹ್ಮದ್ ಶೇಖ್ ಉಪಸ್ಥಿತರಿದ್ದರು.
Next Story