ಯಾದಗಿರಿ | ಕಂದಕೂರ ಗ್ರಾಮದ ಸರಕಾರಿ ಜಮೀನು ವಶಪಡಿಸಿಕೊಳ್ಳಲು ಆಗ್ರಹ
ಯಾದಗಿರಿ: ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಸರಕಾರಿ ಗೈರಾಣ ಸರ್ವೆ. ನಂ 300 ರಲ್ಲಿ ಒಟ್ಟು 9-25 ಗುಂಟೆ ಸರ್ಕಾರಿ ಜಮೀನನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಜಿಲ್ಲಾಡಳಿತ ವಶಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾಜಿಕ ಹೋರಾಟಗಾರ ಉಮೇಶ್ ಕೆ.ಮುದ್ನಾಳ ಮನವಿ ಪತ್ರ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗುರುಮಠಕಲ್ ಹೋಬಳಿಯಲ್ಲಿ ಬರುವ ಕಂದಕೂರ ಗ್ರಾಮದ ಸ.ನಂ 300 ರ ಒಟ್ಟು ಕ್ಷೇತ್ರ 9-25 ಎ-ಗುಂಟೆ ಜಮೀನು ಇದು ಗೈರಾಣ ಜಮೀನಾಗಿದ್ದು, ಈ ಜಮೀನಿನಲ್ಲಿ ಸಾಮಾನ್ಯವಾಗಿ ಹುಲ್ಲು ಗಿಡ ಗಂಟೆಗಳು ಬೆಳೆದಿರುತ್ತದೆ, ಆ ಜಮೀನಿನಲ್ಲಿ ಗ್ರಾಮದ ಬಡ ರೈತರು ತಮ್ಮ ಜನ-ಜಾನುವಾರುಗಳು ಇಲ್ಲಿಯೇ ಬೀಡು ಬಿಟ್ಟು ಮೇಯಿಸುತ್ತಾರೆ. ಆದರೆ ಇದೇ ಗೈರಾಣ ಜಮೀನನ್ನು ಇದೇ ಗ್ರಾಮದ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಜಮೀನಿನ ಮೇಲೆ ಬಿದ್ದಿದ್ದು, ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಶಾಂತಪ್ಪ, ಶರಣಗೌಡ ಮಾಲಿ ಪಾಟೀಲ್, ಶಂಕರೆಪ್ಪ ದೊಡ್ಡಮೇಟಿ, ದಂಡಪ್ಪಗೌಡ, ಪರ್ವತರೆಡ್ಡಿ, ಶಿವಪ್ಪ ನಾಟೇಕರ್, ಹಯ್ಯಾಳಪ್ಪಗೌಡ ಸೇರಿದಂತೆ ಅನೇಕರು ಇದ್ದರು.