ಯಾದಗಿರಿ | ವಿದ್ಯುತ್ ಅವಘಡ : ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಣೆ
ಯಾದಗಿರಿ: ವಿದ್ಯುತ್ ಅವಘಡದಿಂದಾಗಿ ಹಾನಿಯಾಗಿದ್ದ ಫಲಾನುಭವಿಗಳಿಗೆ ನಗರದ ತಮ್ಮ ಕಚೇರಿ ಆವರಣದಲ್ಲಿ ಸುರಪುರ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಅವರು ಪರಿಹಾರದ ಧನದ ಚೆಕ್ ವಿತರಿಸಿದರು.
ಈ ಸಮಯದಲ್ಲಿ ಮಾತನಾಡಿದ ಅವರು, ಸರಕಾರದಿಂದ ಲಭಿಸಿರುವ ಪರಿಹಾರ ಧನದ ಚೆಕ್ ಗಳನ್ನು ನೀಡಲಾಗುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪರಿಹಾರ ಹಣವನ್ನು ವ್ಯರ್ಥ ಮಾಡದೇ ತಮ್ಮ ಜೀವನೋಪಯಾಕ್ಕೆ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸರಕಾರದ ಇಂಧನ ಇಲಾಖೆಯ ಸೂರ್ಯಘರ್ ಯೋಜನೆಯ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ್, ಜೆಸ್ಕಾಂ ಇಇ ರಾಜಶೇಖರ, ಎಇಇ ರಫೀಕ್, ಎಇ ಅಂಬ್ರೀಶ, ಜೆಇ ಶಾಂತಪ್ಪ, ಮುಖಂಡರಾದ ಬಸವಂತರಾಯ ಹೆಮ್ಮಡಗಿ ಸೇರಿದಂತೆ ಇತರರಿದ್ದರು.
Next Story