ಯಾದಗಿರಿ | ವಡಗೇರಾ ಠಾಣೆ ಪಿಎಸ್ಐ ಅವರಿಂದ ಬೈಕ್ ಸವಾರರಿಗೆ ಹೆಲ್ಮೇಟ್ ಜಾಗೃತಿ
ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೇಟ್ ಕಡ್ಡಾಯವಾಗಿ ಧರಿಸಿ : ಪಿಎಸ್ಐ ಮೈಹಿಬೂಬ ಅಲೀ
ಯಾದಗಿರಿ : ದ್ವಿಚಕ್ರ ವಾಹನ ಸವಾರರು ಸುರಕ್ಷಿತವಾಗಿ ಸಂಚರಿಸಲು ಪ್ರತಿಯೊಬ್ಬರು ಹೆಲ್ಮೇಟ್ ಕಡ್ಡಾಯವಾಗಿ ಧರಿಸಿ ಪ್ರಯಾಣ ಮಾಡಬೇಕು ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಮೈಹಿಬೂಬ್ ಅಲೀ ಹೇಳಿದ್ದಾರೆ.
ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ತಾಲ್ಲೂಕಿನ ವಡಗೇರಾ ಕ್ರಾಸ್ ಬಳಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೇಟ್ ಧರಿಸುವ ಜನ ಜಾಗೃತಿ ಮೂಡಿಸಿ ಮಾತನಾಡಿದರು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ಸಂಚರಿಸಬೇಕು. ಸರಕಾರದ ನಿಯಮವನ್ನು ಪ್ರತಿಯೊಬ್ಬರು ತಪ್ಪದೆ ಪಾಲಿಸಬೇಕು. ಡಿ.1 ರಿಂದ ಕಡ್ಡಾಯ ಹೆಲ್ಮೇಟ್ ದರಿಸಬೇಕೆಂದು ಪೊಲೀಸ್ ಇಲಾಖೆ ಜಾರಿಗೊಳಿಸಿದೆ ಎಂದು ತಿಳಿಸಿದರು.
ಹೆಲ್ಮೇಟ್ ಧರಿಸುವುದರಿಂದ ಸುರಕ್ಷಿತವಾಗಿ ಮನೆಗೆ ತಲುಪಬಹುದು. ಕುಟುಂಬದ ಸದಸ್ಯರು ನಿಮ್ಮನ್ನೆ ನಂಬಿರುತ್ತಾರೆ. ಹೆಲ್ಮೇಟ್ ಧರಿಸುವುದರಿಂದ ಅಪಘಾತವಾದ ಸಂದರ್ಭ ತಲೆಗೆ ಪೆಟ್ಟಾಗುವುದಿಲ್ಲಾ ಎಂದು ತಿಳಿಸಿದರು.
ಯಾದಗಿರಿ ಚಿತ್ತಾಪುರ ರಸ್ತೆಯಲ್ಲಿ ಕೂಡ ಬೈಕ್ ಸವಾರರಿಗೆ ಹೆಲ್ಮೇಟ್ ಬಗ್ಗೆ ಜಾಗೃತಿ ಮೂಡಿಸಿದರು. ಮುಖ್ಯ ಪೇದೆ ಶರಣಪ್ಪ ರಾಂಪೂರೆ, ಪೊಲೀಸ್ ಸಿಬ್ಬಂದಿಗಳಾದ ಈರಣ್ಣ, ಗೃಹರಕ್ಷಕ ಗೋವಿಂದ ರಾಠೋಡ್ ಇತರರು ಇದ್ದರು.