ಯಾದಗಿರಿ | ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡಿಲ್ಲ : ಶ್ರವಣಕುಮಾರ ನಾಯಕ
ಯಾದಗಿರಿ : ಸುರಪುರ ತಾಲೂಕಿನ 18 ಗ್ರಾಮ ಪಂಚಾಯತ್ಗಳಲ್ಲಿ 2020ರಿಂದ 2024ನೇ ಸಾಲಿನವರೆಗೆ ಅಂಬೇಡ್ಕರ್ ಆವಾಸ್ ಯೋಜನೆ, ಬಸವ ವಸತಿ ಯೋಜನೆ, ಇಂದಿರಾ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿ ಇತರೆ ಯೋಜನೆಗಳಲ್ಲಿ ನೀಡಿರುವ ವಸತಿ ಯೋಜನೆ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿಲ್ಲ ಎಂದು ಜೆಡಿಎಸ್ ಮುಖಂಡ ಶ್ರವಣಕುಮಾರ ನಾಯಕ ಆರೋಪಿಸಿದ್ದಾರೆ.
ಅಲ್ಲದೆ 2020 ರಿಂದ 2024ನೇ ಸಾಲಿನ ವರೆಗೆ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ವಸತಿ ಯೋಜನೆ ಮನೆಗಳಿಗೆ ಆಯ್ಕೆಗೊಳಿಸಿರುವ ಫಲಾನುಭವಿಗಳ ವಿವರ ನೀಡಬೇಕು. ಇಲ್ಲವಾದಲ್ಲಿ ಪಕ್ಷ ದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿಯನ್ನು ಕಚೇರಿಯ ಸಿರಸ್ತೆದಾರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಅನೇಕರು ಉಪಸ್ಥಿತರಿದ್ದರು.
Next Story