ಯಾದಗಿರಿ | ಒತ್ತಡ ಮುಕ್ತಿಗಾಗಿ ಪತ್ರಕರ್ತರು ಧ್ಯಾನ ಮಾಡಬೇಕು : ಎಸ್.ಎಚ್.ರಡ್ಡಿ ಸಾವೂರ
ಯಾದಗಿರಿ : ಪತ್ರಕರ್ತರು ಒತ್ತಡದ ಮುಕ್ತಿಗಾಗಿ ಧ್ಯಾನ ಮಾಡಬೇಕು ಎಂದು ರವಿಶಂಕರ ಗುರೂದೇವ ಅವರ ಆರ್ಟ್ ಆಫ್ ಲಿವಿಂಗ್ ನ ಜಿಲ್ಲಾ ಸಂಯೋಜಕರಾದ ಎಸ್.ಎಚ್.ರಡ್ಡಿ ಸಾವೂರ ಅವರು ತಿಳಿಸಿದರು.
ಪತ್ರಿಕಾ ಭವನದಲ್ಲಿ ವಿಶ್ವ ಧ್ಯಾನ ದಿನ ಕಾರ್ಯಕ್ರಮದ ಅಂಗವಾಗಿ ʼಜಿಲ್ಲಾ ಪತ್ರಕರ್ತರಿಗೆ ಧ್ಯಾನ ಕಾರ್ಯಕ್ರಮʼದಲ್ಲಿ ಅವರು ಮಾತನಾಡಿದರು.
ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಮನಸಂತೋಷ ಉಂಟಾಗುವುದರ ಮೂಲಕ ಮಾಡುವ ಕಾಯಕದಲ್ಲಿ ಅದು ಗುಣಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ವೈಜನಾಥ ಹಿರೇಮಠ, ಸಿದ್ದಪ್ಪ ಲಿಂಗೇರಿ, ಅರುಣ ಕುಮಾರ, ಬಸವಂತ್ರಾಯ ಶಿವರಾಯ ಸೇರಿದಂತೆ ಇನ್ನಿತರರು ಇದ್ದರು.
Next Story