ಯಾದಗಿರಿ | ಕಲಿಕಾ ಮೇಳ ಮಕ್ಕಳಲ್ಲಿ ಹೊಸ ಹುಮ್ಮಸ್ಸು ಮೂಡಿಸುತ್ತದೆ: ಪಂಡಿತ್ ನಿಂಬೂರ
ಯಾದಗಿರಿ : ಕಲಿಕಾ ಮೇಳ ಹೊಸ ಕಲಿಕಾ ಆಯಾಮಗಳನ್ನು ಒಳಗೊಂಡ ಮಾದರಿಗಳನ್ನು ಅಭಿವ್ಯಕ್ತ ಮಾಡುವುದರಿಂದ ಮಕ್ಕಳ ಮನೋವಿಕಾಸಕ್ಕೆ ಸಹಕಾರಿ ಹಾಗೂ ಮಕ್ಕಳಲ್ಲಿ ಹೊಸ ಹುಮ್ಮಸ್ಸು ಮೂಡಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ ಹೇಳಿದ್ದಾರೆ.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮಜಿ ಫೌಂಡೇಷನ್ ಸಹಯೋಗದಲ್ಲಿ ಕಲಿಕಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಮೂಲಕ ಇವತ್ತು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಲಿಕಾ ಮೇಳಗಳು ಮಕ್ಕಳಲ್ಲಿ ಯೋಚನಾ ಸಾಮಥ್ರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಬಿಆರ್‌ಪಿ ಖಾದರ ಪಟೇಲ್ ಮಾತನಾಡಿ, ಕಲಿಕಾ ಮೇಳಗಳು ಮಕ್ಕಳಲ್ಲಿ ಯೋಚಿಸುವ, ಮಾತನಾಡುವ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸುವುದರ ಜೊತೆಗೆ ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಸಂಯೋಜಕ ಶರಣಬಸವ ಗಚ್ಚಿನಮನಿ, ಸಿ.ಆರ್.ಪಿ ಗಳಾದ ರಾಮಪ್ಪ ಗುಂಜಾಳ, ಶಿವುಕುಮಾರ ಕಮತಗಿ ದೊಡ್ಡ ಮಲ್ಲಿಕಾರ್ಜುನ ಹುದ್ದಾರ, ಚೆನ್ನಪ್ಪ ಕ್ಯಾದಗಿ, ಪ್ರಶಾಂತ ಅಕ್ಕಸಾಲಿಗರ ಎಪಿಏಫ್ ಸಂಪನ್ಮೂಲ ವ್ಯಕ್ತಿ ಕೃಷ್ಣ ಬಿಜಾಸಪುರ, ಪ್ರೌಢಶಾಲೆಯ ಮು.ಗು.ಹಸೀನಾಬಾನು, ಭೀಮಣ್ಣ ಪೀರಬಾವಿ, ಹನುಮಂತ್ರಾಯ ನಾಯಕ, ಬಸವರಾಜ ಮಟ್ಲಾ ಹನುಮಂತ ಪೀರಬಾವಿ ಇತರರಿದ್ದರು.