ಯಾದಗಿರಿ: ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭ
ನಾಡಿಗಾಗಿ ಕರವೇ ಕಾರ್ಯಕರ್ತರು ಪ್ರಾಣ ಕೊಡಲೂ ಸಿದ್ಧ: ಸಂತೋಷ

ಯಾದಗಿರಿ/ ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರು ನಾಡು-ನುಡಿಗಾಗಿ ಪ್ರಾಣ ಕೊಡಲು ಸಿದ್ಧರಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಸಂತೋಷ ಡಂಬಳ ಮಾತನಾಡಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ರಚನೆಯಾಗಿ 20 ವರ್ಷಗಳಾದ ಹಿನ್ನೆಲೆಯಲ್ಲಿ ಕರವೇ 20ರ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕರವೇ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಸಂಘಟನೆ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ, ಜಿಲ್ಲಾಧ್ಯಕ್ಷ ಟಿ. ಎನ್. ಭೀಮು ನಾಯಕ ಕಳೆದ ಕೆಲ ತಿಂಗಳುಗಳ ಹಿಂದೆ ಕನ್ನಡ ನಾಮಫಲಕಕ್ಕಾಗಿ ಹೋರಾಟದಲ್ಲಿ ಎರಡು ವಾರ ಸೆರೆಮನೆ ವಾಸ ಅನುಭವಿಸಿದ್ದಾರೆ, ಅಲ್ಲದೆ ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ಅವರು ಅನೇಕ ಹೋರಾಟಗಳು ಕಳೆದ 20 ವರ್ಷಗಳಿಂದ ಸಂಘಟನೆ ನಡೆಸಿಕೊಂಡು ಬರುತ್ತಿದ್ದು ತಾಲೂಕಿನಾದ್ಯಂತ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ಪ್ರಾಸ್ತಾವಿಕವಾಗಿ ಮಾತನಾಡಿ,ಕಳೆದ ಇಪ್ಪತ್ತು ವರ್ಷಗಳಿಂದ ಸಂಘಟನೆ ತಾಲೂಕಿನಲ್ಲಿ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದೆ, ಅಲ್ಲದೆ ಪ್ರತಿವರ್ಷವೂ ರಾಜ್ಯೋತ್ಸವ ಕಾರ್ಯಕ್ರಮ,ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಮುಂದೆಯೂ ಇನ್ನೂ ಹೆಚ್ಚು ನಾಡು ನುಡಿ ಕಾಯುವ ಕೆಲಸವನ್ನು ಮಾಡಲಿದೆ ಎಂದರು.
ನಂತರ ಸರಿಗಮಪ ಖ್ಯಾತಿಯ ಕಲಾವಿದರು,ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರು ಹಾಗೂ ಸೂರ್ಯ ಕುಂದಾಪುರ ಅವರಿಂದ ನಗೆಹಬ್ಬ ಮತ್ತು ಜೂ.ಉಪೇಂದ್ರ ಮತ್ತವರ ತಂಡ ಹಾಗೂ ಸ್ಥಳಿಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ವಿವಿಧ ರಂಗಗಳಲ್ಲಿ ಸಾಧನೆಗೈದ ಅಮರಯ್ಯಸ್ವಾಮಿ ಹಿರೇಮಠ ಜಾಲಿಬೆಂಚಿ,ಜ್ಞಾನಚಂದ ಜೈನ್, ಬಾಪುಗೌಡ ಪಾಟೀಲ್ ಹುಣಸಗಿ, ವೆಂಕೋಬ ದೊರೆ ಬೊಮ್ಮನಹಳ್ಳಿ, ರವಿಕುಮಾರ ನಾಯಕ ಬೈರಿಮರಡಿ, ಭೀಮವ್ವ ಪೂಜಾರಿ, ಡಾ.ಅಶೋಕ ಅಲದರ್ತಿ, ಡಾ.ವರುಣ ಕುಲಕರ್ಣಿ, ವಿನೋದ ಪಿ.ನಾಯಕ, ಹಣಮಂತ ನಾಯಕ ಕಾಕರಗಲ್ಲ,ಮನಮೋಹನ ಪ್ರತಿಹಸ್ತ,ರಾಜೇಶ ಮಸ್ಕಿ,ಕನಕಪ್ಪ ವಾಗಣಗೇರ, ಕೃಷ್ಣ ದರಬಾರಿ,ರಾಜಕುಮಾರ ಸುಬೇದಾರ, ವೆಂಕಟೇಶ್ವರ ಸುರಪುರ,ಚಂದ್ರಪ್ಪ ಪೌರಕಾರ್ಮಿಕ, ಪ್ರಭು ಚಾಮನೂರ, ಉದಯಕುಮಾರ ಗುರಿಕಾರ,ಪ್ರಕಾಶ ಪಿ.ಬಡಿಗೇರ ಇವರುಗಳಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಟಕಕಾರ ಮಲ್ಲೇಶಿ ಕೋನಾಳ,ರಾಷ್ಟç ಮಟ್ಟದ ಬಿಲ್ವಿದ್ಯೆ ಪಟುಗಳಾದ ಭಾಗ್ಯಶ್ರೀ ಬಿ,ಅನ್ನಪೂರ್ಣ,ನವೀನ ಎಸ್ ಹಾಗೂ ಬಲಭೀಮ ಬಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಲಕ್ಷ್ಮೀ ಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ,ದೇವರಗೋನಾಲ ಹೈಯ್ಯಾಳಲಿಂಗೇಶ್ವರ ದೇವಸ್ಥಾನದ ಸಕ್ರೆಪ್ಪ ತಾತನವರು ವಹಿಸಿದ್ದರು.ಸುರಪುರ ಅರಸು ಮನೆತನದ ರಾಜಾ ಲಕ್ಷ್ಮೀ ನಾರಾಯಾಣ ನಾಯಕ, ಬಿಜೆಪಿ ಮುಖಂಡ ಹಣಮಂತ ನಾಯಕ (ಬಬ್ಲುಗೌಡ) ಹಾಗೂ ಮಾಜಿ.ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಕಾರ್ಯಕ್ರಮಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಎಮ್. ಹಳ್ಳಿಕೋಟಿ, ಬಲಭೀಮ ನಾಯಕ ಬೈರಿಮರಡಿ,ರಾಜಾ ರಂಗಪ್ಪ ನಾಯಕ,ಶಂಕರ ನಾಯಕ,ಭೀಮನಗೌಡ ಲಕ್ಷ್ಮೀ ಹೆಮನೂರ, ಭಂಡಾರೆಪ್ಪ ನಾಟೇಕಾರ್, ಬಸವರಾಜ ಕೊಡೇಕಲ್, ಬಸವರಾಜ ದೋರನಳ್ಳಿ,ರಂಗನಾಥಗೌಡ ವೇದಿಕೆಯಲ್ಲಿದ್ದರು.ಕರವೇ ಭೀಮು ನಾಯಕ ಮಲ್ಲಿಬಾವಿ, ಯಮನಯ್ಯ ಗುತ್ತೇದಾರ,ಹಣಮಂತ ತೇಕರಾಳ, ಶರಣಬಸವ ಗುರುಮಠಕಲ್,ಅಬ್ದುಲ್ ವಡಿಗೇರ, ಬಸವರಾಜ ಚನ್ನೂರ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರುಗಳಾದ ಶಿವಮೋನಯ್ಯ ನಾಯಕ, ಶರಣಪ್ಪ ಬೈರಿಮರಡಿ, ವೆಂಕಟೇಶ ಪ್ಯಾಪ್ಲಿ,ನಿಂಗಪ್ಪ ನಾಯಕ ಬಿಜಾಸಪುರ, ಮಲ್ಲು ಕಬಾಡಿಗೇರ, ನಾಗರಾಜ ಪ್ಯಾಪ್ಲಿ, ಮಲ್ಲು ಕವಡಿಮಟ್ಟಿ,ಕೃಷ್ಣ ದೇವಿಕೇರ, ಗೋಪಾಲ ಸತ್ಯಂಪೇಟೆ ಇದ್ದರು.ಕರವೇ ತಾಲೂಕ ಘಟಕದ ಎಲ್ಲಾ ಪದಾಧಿಕಾರಿಗಳು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮಲ್ಲಿಕಾರ್ಜುನ ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.