ಯಾದಗಿರಿ | ಒಪಿಎಸ್ ಜಾರಿಗೊಳಿಸಲು ಆಗ್ರಹಿಸಿ ಪತ್ರ ಚಳುವಳಿ
![ಯಾದಗಿರಿ | ಒಪಿಎಸ್ ಜಾರಿಗೊಳಿಸಲು ಆಗ್ರಹಿಸಿ ಪತ್ರ ಚಳುವಳಿ ಯಾದಗಿರಿ | ಒಪಿಎಸ್ ಜಾರಿಗೊಳಿಸಲು ಆಗ್ರಹಿಸಿ ಪತ್ರ ಚಳುವಳಿ](https://www.varthabharati.in/h-upload/2025/01/25/1317808-untitled-48.webp)
ಸುರಪುರ : ರಾಜ್ಯದಲ್ಲಿನ ಹಳೆ ಪಿಂಚಣಿ ವ್ಯವಸ್ಥೆಯಾದ ಒಪಿಎಸ್ ಮರು ಜಾರಿಗೊಳಿಸುವಂತೆ ಆಗ್ರಹಿಸಿ ಪಿಂಚಣಿ ವಂಚಿತ ಸರಕಾರಿ ನೌಕರರು ಪತ್ರ ಚಳುವಳಿ ಆರಂಭಿಸಿದ್ದಾರೆ.
ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ನಿವೃತ್ತ ಪ್ರಧಾನ ಗುರು ಚಂದಪ್ಪ ಯಾದವ್ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಸಗರನಾಡು ಪ್ರೌಢಶಾಲೆಯ ಆವರಣದಲ್ಲಿ ಪತ್ರ ಚಳುವಳಿಗೆ ಚಾಲನೆ ನೀಡಿ ಮಾತನಾಡಿದರು.
ಈಗಿನ ಕಾಂಗ್ರೆಸ್ ಸರಕಾರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಸರಕಾರಿ ನೌಕರರಿಗೆ ಒಪಿಎಸ್ ಜಾರಿಗೊಳಿಸುವುದಾಗಿ ಭರವಸೆ ನೀಡಿ ಅದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತು. ಸರಕಾರ ರಚನೆಯಾಗಿ ಎರಡು ವರ್ಷವಾಗುತ್ತಿದ್ದರೂ ಇದುವರೆಗೆ ಒಪಿಎಸ್ ಜಾರಿಗೊಳಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಲಾದರೂ ಒಪಿಎಸ್ ಜಾರಿಗೊಳಿಸಿ ಎನ್ಪಿಎಸ್ ರದ್ದುಗೊಳಿಸಬೇಕು ಎಂದು ಪತ್ರ ಚಳುವಳಿ ಮೂಲಕ ಆಗ್ರಹಿಸುವುದಾಗಿ ತಿಳಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರಕ್ಕೆ ಬರೆದ ಪತ್ರಗಳನ್ನು ಅಂಚೆ ಮಾಡುವ ಮೂಲಕ ಚಳುವಳಿ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಗರ ನಾಡು ಶಿಕ್ಷಣ ಸಂಸ್ಥೆಯ ಜಿಪಿಎಸ್ ಪಿಂಚಣಿ ವಂಚಿತ ಶಿಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.