ಯಾದಗಿರಿ | ಪರಸ್ಪರ ದ್ವೇಷಿಸುವುದಕ್ಕಿಂತ ಯೇಸುವಿನಂತೆ ಇತರರನ್ನು ಪ್ರೀತಿಸಿ : ಪಾಸ್ಟರ್ ದಿನೇಶ
ಯಾದಗಿರಿ : ತಾನು ದನದ ಕೊಟ್ಟಿಗೆಯಲ್ಲಿ ಜನಿಸಿದರೂ ತನ್ನನ್ನು ನಂಬಿದವರಿಗೆ ಅರಮನೆ ಜೀವನ ನೀಡಿದವರು ಯೇಸುಕ್ರಿಸ್ತರು ಎಂದು ಫೆಲೋಶಿಪ್ ಚರ್ಚ್ ನ ಪಾಸ್ಟರ್ ದಿನೇಶ ಬಣ್ಣಿಸಿದರು.
ಚಿರಂಜೀವಿ ನಗರದ ಫೆಲೋಶಿಪ್ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ನಿಮಿತ್ಯ ಏರ್ಪಡಿಸಿದ ವಿಶೇಷ ಪ್ರಾರ್ಥನೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಗಣ್ಯರಿಗೆ ಸನ್ಮಾನ, ಗೀತಾ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರರ ಸುಖದಲ್ಲಿ ಸಂತೋಷವನ್ನು ಕಂಡು ಇಡಿ ಜೀವನವನ್ನೇ ಮಾನವರ ಒಳಿಗಾಗಿ ಮುಡುಪಾಗಿದ್ದ ದೇವಿ ಸ್ವರೂಪಿ ಯೇಸು ಎಂದರು.
ಪರಸ್ಪರ ದ್ವೇಷಿಸುವುದಕ್ಕಿಂತ ಯೇಸುವಿನಂತೆ ಇತರರನ್ನು ಪ್ರೀತಿಸುವ ಕೆಲಸ ಮಾಡಬೇಕಾಗಿದೆ. ಕ್ರಿಸ್ತ ಜಯಂತಿ ಶಾಂತಿಯನ್ನು ಹಂಚುವ ಹಬ್ಬವಾಗಿದ್ದು, ಜಗತ್ತಿನೆಲ್ಲೆಡೆ ಸದಾ ಶಾಂತಿ ನೆಲೆಸುವಂತೆ ಪ್ರಾರ್ಥಿಸಬೇಕೆಂದರು.
ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಾದ ಜನಸೇನಾ ರಾಜಧ್ಯಕ್ಷರಾದ ಮೈಲಾರಪ್ಪ ಜಾಗೀರದರ್, ನ್ಯಾಯವಾದಿಗಳಾದ ಮಾರ್ಥಾದಂಪ್ಪ ಮುಷ್ಟೂರ್, ಪರಾಮರೆಡ್ಡಿ ಕಂದಕೂರ್, ಭೀಮರವ್ ಅಬ್ಬಳ್ಳಿ ಇವರನ್ನು ಫೆಲೋಶಿಪ್ ಚರ್ಚ್ ವತಿಯಿಂದ ಸನ್ಮಾಸಲಾಯಿತು.
ಈ ಸಂದರ್ಭದಲ್ಲಿ ಸಾಹಸ ಕಿಡ್ಸ್ ಅಕಾಡೆ ಶಾಲೆ ಅಧ್ಯಕ್ಷರಾದ ಸುಭಾಷ್ ಬಡಿಗೇರ್, ಡೇವಿಡ್, ಚನ್ನಪ್ಪ, ವಿಶ್ವನಾಥ್, ಪರಶುರಾಮ್ , ಸಚಿನ್ ಸೇರಿದಂತೆ ಕೈಸ್ತ ಸಮುದಾಯ ಜನರು ಇದ್ದರು.