ಯಾದಗಿರಿ | ದಿವಳಗುಡ್ಡ ಗ್ರಾಮದ ಪಿಡ್ಡಣ್ಣ ಮುತ್ಯನ ದೇವಸ್ಥಾನ ಹಿಂದೆ ಸಿಕ್ಕ ನವಜಾತ ಗಂಡು ಶಿಶುವಿನ ಪೋಷಕರ ಪತ್ತೆಗಾಗಿ ಮನವಿ
ಸಾಂದರ್ಭಿಕ ಚಿತ್ರ | Photo:freepik
ಯಾದಗಿರಿ : ಡಿ.11 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದಿವಳಗುಡ್ಡ ಗ್ರಾಮದ ಪಿಡ್ಡಣ್ಣ ಮುತ್ಯನ ದೇವಸ್ಥಾನ ಹಿಂದೆ ಸಿಕ್ಕ ಅಂದಾಜು ಐದು ದಿನದ ನವಜಾತ ಗಂಡು ಶಿಶುವಿನ ಪೋಷಕರ ಪತ್ತೆಗಾಗಿ ಮನವಿ ಮಾಡಲಾಗಿದೆ ಎಂದು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮ್ಮೂರ್ತಿ ಅವರು ತಿಳಿಸಿದ್ದಾರೆ.
2024ರ ಡಿ.11 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದಿವಳಗುಡ್ಡ ಗ್ರಾಮದ ಪಿಡ್ಡಣ್ಣ ಮುತ್ಯನ ದೇವಸ್ಥಾನ ಹಿಂದೆ ಅಂದಾಜು ಐದು ದಿನದ ನವಜಾತ ಗಂಡು ಶಿಶು ಸಿಕ್ಕಿದ್ದು, ಸದರಿ ಶಿಶುವಿನ ಪಾಲಕರ ಪತ್ತೆಗಾಗಿ ಬಾಲ ನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015 ರನ್ವಯ ಉಚಿತ ಪತ್ರಿಕಾ ಪ್ರಕಟಣೆ ನೀಡಬೇಕಾಗಿರುವುದರಿಂದ ಹಾಗೂ ವಾರಸುದಾರರು (ಪೋಷಕರು) ಯಾರು ಪತ್ತೆಯಾಗದಿದ್ದಾಗ ಸದರಿ ಕಾಯ್ದೆಯಡಿ ಮಗುವಿನ ಯಾರು ವಾರಸುದಾರರು, ಪೋಷಕರು ಇಲ್ಲವೆಂದು ಭಾವಿಸಿ ದತ್ತು ಮುಕ್ತ ಆದೇಶ ನೀಡಲು ಅವಶ್ಯವಿರುವುದರಿಂದ ಸದರಿ ಮಗುವಿಗೆ ಪ್ರಸ್ತುತ ಅಂದಾಜು 15 ದಿನಗಳಾಗಿದ್ದು, ಈ ನವಜಾತ ಗಂಡು ಶಿಶುವಿನ ವಾರಸುದಾರರು, ಪೋಷಕರು ಯಾರಾದರು ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 60 ದಿನಗಳ ಒಳಗೆ ಸಂಪರ್ಕಿಸಬೇಕಾದ ವಿಳಾಸ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೋಣೆ ಸಂಖ್ಯೆ ಸಿ-17, ಒಂದನೇ ಮಹಡಿ, ಜಿಲ್ಲಾಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.