ಯಾದಗಿರಿ | ಮಹಾತ್ಮರ ಜಯಂತಿ ಆಚರಣೆಯ ಪೂರ್ವಭಾವಿ ಸಭೆ

ಸುರಪುರ : ತಾಲೂಕು ಆಡಳಿತದಿಂದ ಮಾ.12 ರಂದು ರೇಣುಕಾಚಾರ್ಯ ಜಯಂತಿ, ಮಾ.14 ರಂದು ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಹಾಗೂ ಮಾ.28 ರಂದು ಶ್ರೀ ಅಗ್ನಿ ಬನ್ನಿರಾಯ ಜಯಂತಿ ಆಚರಣೆ ಅಂಗವಾಗಿ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ಧಾರ್ ಹುಸೇನಸಾಬ್ ಎ.ಸರಕಾವಸ್ ಮಾತನಾಡಿ, ಮೂರು ಜನ ಮಹಾತ್ಮರ ಜಯಂತಿಯನ್ನು ಆಚರಿಸಲಿದ್ದು, ತಾಲೂಕಿನ ಎಲ್ಲ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು ಮತ್ತು ತಾಲೂಕು ಆಡಳಿತದಿಂದ ಆಯಾ ದಿನಾಂಕ ದಂದು ತಹಶೀಲ್ಧಾರ್ ಕಚೇರಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ತಾಲೂಕು ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ್, ದೈಹಿಕ ಶಿಕ್ಷಣಾಧಿಕಾರ ಮಲ್ಲಣ್ಣ ದೊಡ್ಮನಿ, ಆರೋಗ್ಯ ಇಲಾಖೆಯ ಮಲ್ಲಪ್ಪ ಗೋಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಗ್ಯಾನಪ್ಪ ಮೇಟಿ, ಸಿಡಿಪಿಓ ಇಲಾಖೆಯ ಪವನಕುಮಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ, ಬಸಲಿಂಗಯ್ಯ ಸ್ವಾಮಿ ಶ್ರೀಗಿರಿಮಠ, ಶಾಂತಯ್ಯಸ್ವಾಮಿ ಹಿರೇಮಠ, ಶಿವಕುಮಾರ ಹಿರೇಮಠ ರುಕ್ಮಾಪುರ, ಬಸಯ್ಯ ಗಣಚಾರಿ ದೇವಾಪುರ, ವೀರಭದ್ರಯ್ಯಸ್ವಾಮಿ ಹಿರೇಮಠ ಬೋನ್ಹಾಳ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಬೋನ್ಹಾಳ, ಅಮರೇಶಸ್ವಾಮಿ, ಶರಣಯ್ಯಸ್ವಾಮಿ ಶ್ರೀಗಿರಿಮಠ ಲಕ್ಷ್ಮೀಪುರ, ಬಸವರಾಜ ಕಡಿಮನಿ ಲಕ್ಷ್ಮೀಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.