ಯಾದಗಿರಿ | ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ
![Photo of Letter of appeal Photo of Letter of appeal](https://www.varthabharati.in/h-upload/2025/01/25/1317809-untitled-49.webp)
ಸುರಪುರ : ತಾಲೂಕಿನ ತಿಂಥಣಿ ಗ್ರಾಮದ ಜಗದ್ಗುರು ಮೌನೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಸಂಘದ ನೇತೃತ್ವದಲ್ಲಿ ಸುರಪುರ ನಗರದ ತಹಶೇಲ್ದಾರ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಸಮಿತಿಯ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ ನಾಯಕ ತಿಂಥಣಿ ಮಾತನಾಡಿ, ಜಾತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಶೌಚಾಲಯಗಳ ವ್ಯವಸ್ಥೆ ಮಾಡಬೇಕು, ನದಿಯಲ್ಲಿ ಅಂಗಡಿಗಳ ಹಾಕಲು ಕಡಿವಾಣ ಹಾಕಬೇಕು, ದೇವಸ್ಥಾನದಲ್ಲಿನ ಸ್ವಾಮೀಜಿಗಳು ಜನರಿಗೆ ಮೌನೇಶ್ವರರ ಇತಿಹಾಸ ತಿಳಿಸುವಂತಿರಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೇಲ್ದಾರರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಶಿರಸ್ತೆದಾರ ಮೂಲಕ ಸಲ್ಲಿಸಿದರು. ನಂತರ ಶಾಸಕ ರಾಜ ವೇಣುಗೋಪಾಲ ನಾಯಕ ಅವರಿಗೂ ಅವರ ಕಚೇರಿಗೆ ತೆರಳಿ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕಾಧ್ಯಕ್ಷ ದೇವಿಂದ್ರಪ್ಪ ತಳವಾರಗೇರ, ಅಭಿಷೇಕ್ ವಿಶ್ವಕರ್ಮ, ವಿಜಯಕುಮಾರ್ ಹಳಿಸಗರ, ರವಿ ಪತ್ತಾರ್ ಶಹಾಪುರಕರ್, ಫಕ್ರುದ್ದೀನ್ ಹವಾಲ್ದಾರ್, ಬಸವಂತರಾಯ ಸೂಗೂರು ಸೇರಿದಂತೆ ಅನೇಕರು ಭಾಗವಹಿಸಿದ್ದರು.