ಯಾದಗಿರಿ | ಕಡೇಚೂರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ರಾಜು ಮೇತ್ರೆ ಮನವಿ
ಯಾದಗಿರಿ : ಜಿಲ್ಲೆಯ ಸೈದಾಪುರ ಹೋಬಳಿಯ ಕಡೇಚೂರ ಗ್ರಾಮದಲ್ಲಿ ನಡೆಯುತ್ತಿರುವ ಅಂಗಡಿ / ಹೋಟೆಲ್ ಗಳಲ್ಲಿ ಬೆಳಗ್ಗೆ 7ರಿಂದ ಮದ್ಯರಾತ್ರಿವರೆಗೆ ಅಕ್ರಮ ಮದ್ಯ ಮಾರಾಟ ಸತತವಾಗಿ ನಡೆಯುತ್ತಿದೆ ಕೂಡಲೇ ಮದ್ಯ ಅಂಗಡಿಗಳನ್ನು ತಡೆಹಿಡಿದು ಸೂಕ್ತ ಕ್ರಮ ಜರುಗಿಸಬೇಕು ಎಂದು ಮಾದಿಗ ದಂಡೋರ ಎಂ.ಆರ್.ಪಿಎಸ್ ಯಾದಗಿರಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜು ಮೇತ್ರೆ ಅವರು ಯಾದಗಿರಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು
ಮನವಿ ಸಲ್ಲಿಸಿ ಮಾತಾನಾಡಿದ ಅವರು, ಅಕ್ರಮ ಮದ್ಯ ಮಾರಾಟಗಾರರ ಹಿಂದೆ ಕಾಣದ ಕೈಗಳಿದ್ದು, ಈ ಎಲ್ಲ ಅಕ್ರಮಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ. ಸೈದಾಪೂರ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಕಡೇಚೂರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಕ್ರಮದಾರರ ಮೇಲೆ ಕಾನೂನಿನ ಕ್ರಮಕ್ಕೆ ಮುಂದಾಗಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ದೇವು ಲಿಂಗೇರಿ, ಮಲ್ಲಪ್ಪ ಸೈದಾಪೂರ, ಅರ್ಜುನ ಚಿಗನೂರ, ಇದ್ದರು.
Next Story