ಯಾದಗಿರಿ | ಕನ್ನಡ ಸೇನೆ ಕರ್ನಾಟಕ ಸುರಪುರ ಘಟಕದ ಪದಾಧಿಕಾರಿಗಳ ನೇಮಕ
ಯಾದಗಿರಿ : ಸುರಪುರ ನಗರದ ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಕನ್ನಡ ಸೇನೆ ಕರ್ನಾಟಕದ ತಾಲ್ಲೂಕು ಘಟಕದ ಸಭೆ ನಡೆಸಿ ಸುರಪುರ ನಗರ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಲ್ಲು ಹೊಸ್ಮನಿ ಮಾತನಾಡಿ, ಕನ್ನಡ ಸೇನೆ ಕರ್ನಾಟಕ ನಾಡು ನುಡಿಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಂಘಟನೆಯಾಗಿದೆ. ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ನಾಡಿನ ಸೇವೆ ಮಾಡುತ್ತಿರುವ ಸಂಘಟನೆಯಾಗಿದ್ದು,ಇಂದು ತಾವೆಲ್ಲರು ಸಂಘಟನೆಗೆ ಸೇರಿ ನಾಡು ನುಡಿಗಾಗಿ ಹೋರಾಟಕ್ಕೆ ಮುಂದಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಸಭೆಯಲ್ಲಿ ತಾಲ್ಲೂಕು ಕಾರ್ಯಾಧ್ಯಕ್ಷ ಭಾಗನಾಥ ಗುತ್ತೇದಾರ, ಮುಖಂಡರಾದ ರಂಗನಾಥ ಪ್ಯಾಪ್ಲಿ,ಶಕೀಲ್ ಅಹ್ಮದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಗರ ಪದಾಧಿಕಾರಿಗಳು :
ಇಮ್ತಿಯಾಜ್ ಮಿರ್ಜಾ ಬೇಗ್ (ಗೌರವಾಧ್ಯಕ್ಷ), ಅಕ್ಷಯಕುಮಾರ ಎನ್.ಕಟ್ಟಿಮನಿ (ಅಧ್ಯಕ್ಷ), ಮಹೇಶ ವಿ.ನಾಯಕ, ಮಂಜುನಾಥ ಜಿ.ಪತ್ತಾರ (ಉಪಾಧ್ಯಕ್ಷರು), ಬಸವರಾಜ ನಗರಖಾನಿ (ಪ್ರ.ಕಾರ್ಯದರ್ಶಿ), ಕಿರಣಕುಮಾರ ವಿ.ನಾಯಕ (ಸಂ.ಸಂಚಾಲಕರು), ರಂಗಣಗೌಡ, ಭೀಮಣಗೌಡ ಪೋ.ಪಾಟೀಲ್ (ಪ್ರಧಾನ ಕಾರ್ಯದರ್ಶಿಗಳು), ಭೀಮು ಆರ್.ನಾಯಕ (ಖಜಾಂಚಿ), ಶಿವುಕುಮಾರ ಸಿ.ನಾಯಕ (ಕಾರ್ಯದರ್ಶಿ), ಹಣಮಂತ ಡಿ.ನಾಯಕ (ಸಂಚಾಲಕರು) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರಾಹುಲ್ ಭಂಡಾರಿ, ಸುನೀಲ್, ಯಂಕೋಬ ಗುಡಗುಂಟಿ, ರಾಜು ಟೋಕಾಪುರ, ಅಪ್ಪು, ರಾಮು ನಾಯಕ, ಪುನೀತ್, ರಾಮುನಾಯಕ, ರಂಗನಾಥ ನಾಯಕ, ಹಣಮಂತ, ನಂದಪ್ಪ, ಶ್ರೀನಿವಾಸ ನಾಯಕ, ರಮೇಶ ನಾಯಕ, ರಾಕೇಶ ಹೊಸಮನಿ, ಫಿರಾಸತ್ ಮಿರ್ಜಾಬೇಗ್, ಅಭಿನಾಯಕ, ಮುದಕಪ್ಪ ದೋಶಿ, ಚಂದ್ರು ಮಡಿವಾಳ, ಭೀಮು ವiಡಿವಾಳ, ರಮೇಶ ನಾಯಕ ಮುಂದಿನಮನಿ, ಆಕಾಶ ನಾಯಕ ಗೋಸಲರ್, ಮೌನೇಶ ಪತ್ತಾರ, ಭೀಮು ಟೋಕಾಪುರ, ಪ್ರಕಾಶ ಗೋಡೆಕಾರ, ನಿಂಗರಾಜ ಚಲವಾದಿ, ಶರತ್ ಎನ್.ಕಟ್ಟಿಮನಿ, ಅಭಿ ಎಸ್.ಪತ್ತಾರ ಅವರನ್ನು ನೇಮಕಗೊಳಿಸಲಾಯಿತು.