ಯಾದಗಿರಿ | ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ವಾತಾವರಣ ನಿರ್ಮಿಸಲು ವೀರನಗೌಡ ಸಲಹೆ
![Photo of Program Photo of Program](https://www.varthabharati.in/h-upload/2025/01/25/1317806-whatsapp-image-2025-01-25-at-71419-pm.webp)
ಯಾದಗಿರಿ : ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ವಾತಾವರಣವನ್ನು ನಿರ್ಮಿಸಬೇಕು ಎಂದು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ವೀರನಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜ.24ರ ಭಾನುವಾರ ದಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ಯ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು (ಪ್ರಭಾರ) ನಿರ್ದೇಶನದಂತೆ, ಜಿಲ್ಲಾಡಳಿತ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಮನ್ವಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಮ್ಮಿಕೊಂಡ ಮಹಿಳಾ ವಿಶೇಷ ಗ್ರಾಮ ಸಭೆಗಳು ಆಯೋಜಿಸಲಾಗಿದೆ. ಮಹಿಳಾ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಮಿಷನ್ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಮಹಿಳಾ ಸುರಕ್ಷತೆ ಮತ್ತು ಭದ್ರತೆ, ಆರ್ಥಿಕ ಅಭಿವೃದ್ಧಿ, ಉದ್ಯೋಗ, ಕಾನೂನು ಅರಿವು, ಉದ್ಯಮಶೀಲತೆ, ಆರೋಗ್ಯ ರಕ್ಷಣೆ, ಗುಣಮಟ್ಟದ ಶಿಕ್ಷಣ, ಡಿಜಿಟಲ್ ಸಾಕ್ಷರತೆ ಮತ್ತು ಸಾಮಾಜಿಕ ಭದ್ರತೆಯನ್ನು ಕಲ್ಪಿಸುವ ಮೂಲಕ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುತ್ತದೆ ಎಂದು ಹೇಳಿದರು.
ಮಹಿಳಾ ಸ್ನೇಹಿ ಗ್ರಾಮವಾಗಿ ಪರಿವರ್ತಿಸಲು ಮತ್ತು ಸ್ಥಳೀಯ ಅಭಿವೃದ್ಧಿಯನ್ನು ಹೆಚ್ಚು ಅಂತರ್ಗತ ಹಾಗೂ ಸಮರ್ಥನೀಯವಾಗಿಸಲು ಈ ಕೆಳಕಂಡ 9 ವಿಷಯಗಳ ಕುರಿತು ಚರ್ಚಿಸಲಾಯಿತು.
ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯಗಳ ಪಂಚಾಯತ್ ಗ್ರಾಮಗಳ ರಚನೆ, ಆರೋಗ್ಯ ಕರಗ್ರಾಮ, ಮಕ್ಕಳ ಸ್ನೇಹಿ ಗ್ರಾಮ, ಸಮರ್ಪಕ ನೀರಿನ ಪೂರೈಕೆ ಗ್ರಾಮ, ಸ್ವಚ್ಚ ಮತ್ತು ಹಸಿರು ಗ್ರಾಮ, ಸ್ವಾವಲಂಭಿ ಮೂಲ ಸೌಕರ್ಯಗಳ ಗ್ರಾಮ ಪಂಚಾಯತ್ ಸಾಮಾಜಿಕವಾಗಿ ನ್ಯಾಯಯುತ ಹಾಗೂ ಸಾಮಾಜಿಕವಾಗಿ ಸುರಕ್ಷಿತ ಗ್ರಾಮ, ಉತ್ತಮ ಆಡಳಿತದ ಗ್ರಾಮ, ಮಹಿಳಾ ಸ್ನೇಹಿ ಗ್ರಾಮವನ್ನು ಆಗಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.