ಯಾದಗಿರಿ | ರಸ್ತೆಯಲ್ಲೇ ಹೊತ್ತಿ ಉರಿದ ಕಾರು ; ನಾಲ್ವರು ಅಪಾಯದಿಂದ ಪಾರು

ಯಾದಗಿರಿ : ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ರಸ್ತೆಯಲ್ಲೇ ಕಾರೊಂದು ಹೊತ್ತಿ ಉರಿದ ಘಟನೆ ನಗರದ ಹೊರ ವಲಯದ ಮುದ್ನಾಳ್ ಕ್ರಾಸ್ ಹತ್ತಿರ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ವಿವರ ಲಭ್ಯವಾಗಿಲ್ಲ. ಎಕ್ಸ್ ಯುವಿ 300 ಕಾರ್ ನೋ TN 12 AF 2750 ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ
Next Story