ಯಾದಗಿರಿ | ಕೂಲಿ ಕಾರ್ಮಿಕರಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ

ವಡಗೇರಾ : ಬಡ ಕೂಲಿ ಕಾರ್ಮಿಕರಿಗೆ ಅಗತ್ಯ ಸೌಲಭ್ಯ, ಶಿಕ್ಷಣ, ಮೂಲಭೂತ ಹಕ್ಕುಗಳನ್ನು ಒದಗಿಸಿಕೊಟ್ಟ ಮಹಾನ್ ನಾಯಕ ಸಂವಿಧಾನ ಶಿಲ್ಪಿಯನ್ನು ನಾವು ಗೌರವಿಸಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ ಎಂದು ಪಿಡಿಓ ಸಿದ್ಧವೀರಪ್ಪ ಅವರು ಹೇಳಿದರು.
ತಾಲ್ಲೂಕಿನ ಐಕೂರು ಗ್ರಾಪಂ ವ್ಯಾಪ್ತಿಯ ಮುನಮುಟಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಪ್ರಯುಕ್ತ ಗ್ರಾಮದ ಹೊರವಲಯದಲ್ಲಿ, ನರೇಗಾ ಯೋಜನೆಯಡಿ ಕೆಲಸ ಮಾಡುವ ಸ್ಥಳದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಜಯಂತಿ ಆಚರಣೆ ಮಾಡಲಾಯಿತು.
ತಾಲ್ಲೂಕು ಪಂಚಾಯತ ಟಿಐಇಸಿ ದುರ್ಗೇಶ್ ರವರು ಮಾತನಾಡಿದರು.
ಈ ವೇಳೆ ಟಿಐಇಸಿ ದುರ್ಗೇಶ್, ಟಿಎಇ ಬಾಸ್ಕರ್ ರಾವ್, ಗ್ರಾಪಂ ಉಪಾಧ್ಯಕ್ಷರು, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಹಾಗೂ ಇತರ ನರೇಗಾ ಕೂಲಿ ಕಾರ್ಮಿಕರು ಇದ್ದರು.
Next Story